ಮುಂಬೈ: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಲಿರುವ ಕೇಂದ್ರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಿವೆ. ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಇತ್ತ ಷೇರುಪೇಟೆಯಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿದೆ.
ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಆರಂಭಿಕ ವಹಿವಾಟಿನಲ್ಲಿ 133 ಅಂಶಗಳ ಚೇತರಿಕೆ ಕಂಡಿದ್ದು, 17,796 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ. ಸೆನ್ಸೆಕ್ಸ್ 59,900 ಅಂಕಗಳಿಗೆ ಏರಿಕೆಯಾಗಿದೆ.
ಇನ್ನು ಬಿಎಸ್ಇ 437.32 ಅಂಶಗಳ ಚೇತರಿಕೆಯೊಂದಿಗೆ ಆರಂಭವಾಗಿದೆ. ಬೆಳಿಗ್ಗೆ 59,987.22 ಅಂಶಗಳಲ್ಲಿ ಬಿ ಎಸ್ ಇ ವಹಿವಾಟು ನಡೆಸುತ್ತಿದ್ದು, ಹೂಡಿಕೆದಾರರಲ್ಲಿ ಬಜೆಟ್ ಬಗ್ಗೆ ಇರುವ ನೀರೀಕ್ಷೆಗಳು ಈಡೇರಬಹುದು ಎಂಬ ಆಶಾವಾದವನ್ನು ಸಂಕೇತಿಸುವಂತಿದೆ.