ಅರಬ್ ರಾಷ್ಟ್ರದ ಪಾಮ್ ಫೌಂಟೇನ್ ವಿಶ್ವದಲ್ಲೇ ಅತ್ಯಂತ ದೊಡ್ಡ ಕಾರಂಜಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ವಿವಿಧ ಬಣ್ಣದ ಲೈಟ್ಗಳಲ್ಲಿ ನೀರಿನ ಅಲೆಗಳು ಆಕಾಶಕ್ಕೆ ಚಿಮ್ಮುವ ರೀತಿಯಲ್ಲಿ ಇಲ್ಲಿನ ಕಾರಂಜಿಗಳನ್ನ ಅಲಂಕರಿಸಲಾಗಿದೆ.
ಈ ಪಾಮ್ ಕಾರಂಜಿ ದುಬೈನ ಪಾಮ್ ಜುಮೇರಿಯಾದಲ್ಲಿ ಇದೆ. ಇದೀಗ ವಿಶ್ವದ ಅತಿದೊಡ್ಡ ಕಾರಂಜಿ ಎಂಬ ಹೆಗ್ಗಳಿಕೆ ಪಡೆಯೋದ್ರ ಜೊತೆಗೆ ಗಿನ್ನೆಸ್ ಬುಕ್ನಲ್ಲೂ ತನ್ನ ಹೆಸರನ್ನ ನಮೂದಿಸಿದೆ. ಅಂದಹಾಗೆ ಇಲ್ಲಿನ ಕಾರಂಜಿಗಳು ಭೂಮಿಯಿಂದ 14,000 ಚದರ ಅಡಿಗಳಷ್ಟು ಎತ್ತರ ಚಿಮ್ಮುತ್ತವೆ. ಇಲ್ಲಿನ ಕಾರಂಜಿಗಳನ್ನ 3000 ಎಲ್ಇಡಿ ದೀಪಗಳನ್ನ ಬಳಸಿ ಅಲಂಕರಿಸಲಾಗುತ್ತೆ.