23 ವರ್ಷದ ಜರ್ಮನ್-ಇರಾಕಿ ಮಹಿಳೆಯೊಬ್ಬರು ತನ್ನ ಮರಣವೆಂದು ಬಿಂಬಿಸಲು ತನ್ನನ್ನೇ ಹೋಲುವ ಮಹಿಳೆಯನ್ನ ಹತ್ಯೆ ಮಾಡಿದ್ದಾಳೆ. ಶರಬನ್ ಕೆ ಎಂಬಾಕೆ ತನ್ನಂತೆಯೇ ಕಾಣುವ ಮಹಿಳೆಯನ್ನು ಕೊಂದ ಆರೋಪವನ್ನು ಎದುರಿಸುತ್ತಿದ್ದಾರೆ.
ಆಗಸ್ಟ್ 2022 ರಲ್ಲಿ ನಡೆದ ಈ ಕೊಲೆಯನ್ನು ಶೇಕಿರ್ ಕೆ ಎಂಬ ಕೊಸೊವನ್ ವ್ಯಕ್ತಿಯ ಸಹಾಯದಿಂದ ನಡೆಸಲಾಗಿದೆ ಎಂದು ಹೇಳಲಾಗಿದೆ. ಕೌಟುಂಬಿಕ ವಿವಾದದ ಕಾರಣದಿಂದ ಶರಬನ್ ತನ್ನ ಸ್ವಂತ ಮರಣವನ್ನು ನಕಲಿ ಮಾಡಲು ಬಯಸಿದ್ದಳು. ಅದಕ್ಕಾಗಿ ಆಕೆ ತನ್ನನ್ನೇ ಹೋಲುವ ಅಲ್ಜೀರಿಯಾದ ಮಹಿಳೆ ಖಾದಿಡ್ಜಾ ಒ ನನ್ನು ಕೊಂದು ಇದೀಗ ಬಂಧನಕ್ಕೊಳಗಾಗಿದ್ದಾಳೆ.
ಕೊಲೆಗೆ ಬಳಸಿದ ಆಯುಧ ಇನ್ನೂ ಪತ್ತೆಯಾಗಿಲ್ಲ. ಆದರೆ ಖದೀಜಾ ಖಾದಿಡ್ಜಾ ಓನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂಬುದಕ್ಕೆ ಪುರಾವೆಗಳು ಅಗಾಧವಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಖಾದಿಜಾಳನ್ನು 50ಕ್ಕೂ ಹೆಚ್ಚು ಚಾಕು ಇರಿತದಿಂದ ಸಾಯಿಸಿ ಆಕೆಯ ಮುಖವನ್ನು ವಿರೂಪಗೊಳಿಸಲಾಗಿದೆ.
ಅವಳನ್ನು ಕೊಂದ ನಂತರ ಇಬ್ಬರು ಆರೋಪಿಗಳು ಆಕೆಯ ಶವವನ್ನು ತಮ್ಮ ಕಾರಿನ ಹಿಂದಿನ ಸೀಟಿನಲ್ಲಿ ಇಟ್ಟು ಇಂಗೋಲ್‌ಸ್ಟಾಡ್‌ಗೆ ತೆರಳಿದ್ದಾರೆ. ಅಲ್ಲಿ ಶರಬನ್ ಅವರ ಪೋಷಕರು ಶವವನ್ನು ನೋಡಿ ಅದು ಆಕೆಯದ್ದೇ ಶವವೆಂದು ನಂಬಿದ್ದರು. ಆದರೆ ಆನಂತರ ಕೆಲವು ಪ್ರಶ್ನೆಗಳು ಹುಟ್ಟಿಕೊಂಡವು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಶವ ಖದೀಜಾರದ್ದು ಎಂದು ಗುರುತಿಸಿದರು. ಶರಬನ್ ಹತ್ಯೆಯ ಹಿಂದಿನ ವಾರದಲ್ಲಿ ಸಾಮಾಜಿಕ ಮಾಧ್ಯಮಗಳ ವಿವಿಧೆಡೆ ತನ್ನಂತೆ ಕಾಣುವ ಮಹಿಳೆಯರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಸ್ಮೆಟಿಕ್ಸ್ ಆಫರ್‌ನಿಂದ ಆಮಿಷಕ್ಕೊಳಗಾಗಿ ಅವಳನ್ನು ಭೇಟಿಯಾಗಲು ಖಾದಿಡ್ಜಾ ಒಪ್ಪಿಕೊಂಡಿದ್ದರು. ಇಬ್ಬರು ಆರೋಪಿಗಳು ಆಕೆಯನ್ನು ಆಕೆಯ ಅಪಾರ್ಟ್‌ಮೆಂಟ್‌ನಿಂದ ಕರೆದೊಯ್ದು ಹೀಲ್‌ಬ್ರಾನ್ ಮತ್ತು ಇಂಗೋಲ್‌ಸ್ಟಾಡ್ ನಡುವಿನ ಅರಣ್ಯ ಪ್ರದೇಶದಲ್ಲಿ ಕೊಂದಿದ್ದಾರೆ ಎಂದು ನಂಬಲಾಗಿದೆ.
ಜನವರಿ 2023 ರಲ್ಲಿ ಶೇಕಿರ್ ಮತ್ತು ಶರಬನ್ ವಿರುದ್ಧ ಬಂಧನ ವಾರಂಟ್‌ಗಳನ್ನು ಹೊರಡಿಸಲಾಗಿದ್ದು ಪ್ರಕರಣದಲ್ಲಿ ಅವರು ಅಪರಾಧಿಗಳೆಂದು ಸಾಬೀತಾದ ಬಳಿಕ ಜೋಡಿಯು ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಈ ಪ್ರಕರಣವನ್ನು ಜರ್ಮನ್ ಪತ್ರಿಕೆಗಳು “ಡೊಪ್ಪೆಲ್‌ಗ್ಯಾಂಗರ್ ಕೊಲೆ” ಎಂದು ಉಲ್ಲೇಖಿಸಿವೆ. ಏಕೆಂದರೆ ಇಬ್ಬರು ಮಹಿಳೆಯರು ಉದ್ದನೆಯ ಕಪ್ಪು ಕೂದಲು, ಒಂದೇ ರೀತಿಯ ಮೈಬಣ್ಣ ಮತ್ತು ಭಾರೀ ಮೇಕ್ಅಪ್‌ನೊಂದಿಗೆ ಒಂದೇ ರೀತಿ ಕಾಣುತ್ತಿದ್ದರು.