ಕೆಲವೊಮ್ಮೆ ಜೀವನದಲ್ಲಿ ತಿಳಿದೂ ತಿಳಿಯದೇ ದೊಡ್ಡ ತಪ್ಪು ಮಾಡಿ ಬಿಡುತ್ತೇವೆ. ಆಮೇಲೆ ಅದರಿಂದ ಎಷ್ಟು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಅಂಥದ್ದೇ ಒಂದು ವಿಷಯವನ್ನು ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿದ್ದು, ಇದೀಗ ಭಾರಿ ವೈರಲ್ ಆಗಿದೆ.
ಹಾರ್ಟ್ ವೆಸ್ಟ್ ಮಿಡ್ ಲ್ಯಾಂಡ್ಸ್ನಲ್ಲಿ ರೇಡಿಯೊ ನಿರೂಪಕಿಯಾಗಿರುವ ಗೆಮ್ಮಾ ಹಿಲ್ ತಮಗಾಗಿ ವೈಯಕ್ತಿಕ ತರಬೇತುದಾರನನ್ನು ನೇಮಕ ಮಾಡಿಕೊಂಡಿದ್ದರು. ತರಬೇತುದಾರ ಜಿಮ್ ಕ್ಲಾಸ್ ಶುರು ಮಾಡುವ ಪೂರ್ವದಲ್ಲಿ ಒಳ ಉಡುಪಿನಲ್ಲಿ ಒಂದು ಫೋಟೋ ಕ್ಲಿಕ್ ಮಾಡುವಂತೆ ಗೆಮ್ಮಾಳಿಗೆ ಹೇಳಿದ್ದ. ಅದನ್ನು ಹೇಗೆ ಕ್ಲಿಕ್ ಮಾಡಬೇಕು ಎಂಬುದನ್ನು ತೋರಿಸಿದ್ದ. ಒಳ ಉಡುಪಿನಲ್ಲಿ ತನ್ನ ಮೊಬೈಲ್ನಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡ ಗೆಮ್ಮಾ ಅದನ್ನು ತರಬೇತುದಾರರನಿಗೆ ಕಳುಹಿಸಿದ್ದರು.
ಇದನ್ನು ನೋಡಿದ ತರಬೇತುದಾರ, ಅಯ್ಯೋ ಇದನ್ನು ನನಗೆ ಯಾಕೆ ಕಳುಹಿಸಿದಿರಿ ಎಂದು ಪ್ರಶ್ನಿಸಿದ್ದಾನೆ. ಜಿಮ್ ನಲ್ಲಿ ತರಬೇತಿ ಪಡೆದ ಬಳಿಕ ಬಾಡಿ ಹೇಗೆ ಆಗುತ್ತದೆ, ಮೊದಲು ಹೇಗೆ ಇತ್ತು ಎಂಬುದನ್ನು ನೋಡಿಕೊಳ್ಳಲು ಫೋಟೋ ತೆಗೆದು ನಿನ್ನ ಬಳಿ ಇಟ್ಟುಕೊಳ್ಳುವಂತೆ ಹೇಳಿದ್ದು ಅಷ್ಟೆ. ಅಂಡರ್ವೇರ್ನಲ್ಲಿ ಇರುವ ಮಹಿಳೆಯರ ಫೋಟೋ ನನಗೆ ಬೇಡ. ಈ ಫೋಟೋ ನೋಡಿ ನನ್ನ ಸ್ನೇಹಿತೆ ಮುಜುಗರಕ್ಕೆ ಒಳಗಾಗಿದ್ದು, ಇದರ ಬಗ್ಗೆ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾಳೆ. ನಾನು ನನ್ನ ಯಾವುದೇ ಸ್ಟೂಡೆಂಟ್ಸ್ಗಳಿಗೆ ಹೀಗೆ ಒಳ ಉಡುಪಿನ ಫೋಟೋ ಕಳುಹಿಸಲು ಹೇಳುವುದಿಲ್ಲ ಎಂದಿದ್ದಾನೆ.
ನಂತರ ತಾನೆಷ್ಟು ದೊಡ್ಡ ತಪ್ಪು ಮಾಡಿದೆ ಎಂದು ನನಗೆ ಅರಿವಾಯಿತು ಎಂದು ಗೆಮ್ಮಾ ಹಿಲ್ ಬರೆದುಕೊಂಡಿದ್ದಾರೆ.