ಏಕಕಾಲದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಹುಲಿ

ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್) ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ. ಮಂಡ್ಲಾ ಜಿಲ್ಲೆಯ ಮೀಸಲು ಪ್ರದೇಶದ ಮುಕ್ಕಿ ವಲಯದಲ್ಲಿ ಶನಿವಾರ ಮೊದಲ ಬಾರಿಗೆ ಐದು ಮರಿಗಳೊಂದಿಗೆ ಟಿ-27 ಹೆಸರಿನ ಹುಲಿ ಕಾಣಿಸಿಕೊಂಡಿದೆ ಎಂದು ಕೆಟಿಆರ್‌ನ ಕ್ಷೇತ್ರ ನಿರ್ದೇಶಕ ಎಸ್‌ಕೆ ಸಿಂಗ್ ತಿಳಿಸಿದ್ದಾರೆ.

ಸುಮಾರು ಒಂಬತ್ತು ವರ್ಷ ವಯಸ್ಸಿನ ಹುಲಿ ಕಳೆದ ವರ್ಷ ನವೆಂಬರ್‌ನಲ್ಲಿ ಮರಿಗಳಿಗೆ ಜನ್ಮ ನೀಡಿದೆ. ಈ ಮರಿಗಳಿಗೆ ಈಗ ಸುಮಾರು ಮೂರು ತಿಂಗಳ ವಯಸ್ಸಾಗಿದೆ ಎಂದು ಕೆಟಿಆರ್‌ನ ಹಿರಿಯ ವನ್ಯಜೀವಿ ಪಶುವೈದ್ಯ ಸಂದೀಪ್ ಅಗರವಾಲ್ ಹೇಳಿದ್ದಾರೆ.

ಕೆಟಿಆರ್‌ಗೆ ಬರುವ ಪ್ರವಾಸಿಗರು ಮರಿಗಳೊಂದಿಗೆ ಡಿಜೆ ಎಂದು ಜನಪ್ರಿಯವಾಗಿರುವ ಹುಲಿಯನ್ನು ನೋಡಿ ಉತ್ಸುಕರಾಗಿದ್ದಾರೆ ಎಂದು ಸಿಂಗ್ ಹೇಳಿದರು.

ಅಖಿಲ ಭಾರತ ಹುಲಿ ಅಂದಾಜು ವರದಿ 2018 ರ ಪ್ರಕಾರ ಮಧ್ಯಪ್ರದೇಶವು 526 ಹುಲಿಗಳಿಗೆ ನೆಲೆಯಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಮೊದಲ ರಾಜ್ಯವಾಗಿದೆ. ದೇಶದಲ್ಲಿ ಮತ್ತೊಂದು ಹುಲಿ ಗಣತಿ ಕಾರ್ಯ ಕಳೆದ ವರ್ಷ ಪೂರ್ಣಗೊಂಡಿದ್ದು, ಇದೀಗ ವರದಿ ಬರಬೇಕಿದೆ.

ಮಧ್ಯಪ್ರದೇಶವು ಕನ್ಹಾ, ಬಾಂಧವಗಢ, ಪೆಂಚ್, ಸತ್ಪುರ ಮತ್ತು ಪನ್ನಾ ಸೇರಿದಂತೆ ಹಲವಾರು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read