ಎರಡು ಗೂಳಿಗಳು ನಡು ರಸ್ತೆಯಲ್ಲಿ ಕಾದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಗೂಳಿಯೊಂದು ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ಮತ್ತು ಇನ್ನೊಂದನ್ನು ತಿವಿಯುತ್ತಿರುವುದನ್ನು ನೋಡಬಹುದಾಗಿದೆ. ನಂತರ ಅದು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯ ನಿಖರವಾದ ಸ್ಥಳ ತಿಳಿದಿಲ್ಲವಾದರೂ, ಇದು ಭಾರತದ ನಗರದಂತೆ ಕಾಣುತ್ತದೆ.
ಆಗಸ್ಟ್ 2022 ರಲ್ಲಿ ಪೋಸ್ಟ್ ಮಾಡಲಾದ ವಿಡಿಯೋ 6.8 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಮತ್ತು 24 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಏಕೆಂದರೆ ನಡುರಸ್ತೆಯಲ್ಲಿ ಎರಡು ಗೂಳಿಗಳು ಕಾದಾಟ ನಡೆಸುವುದನ್ನು ನೋಡಲು ಜನರು ಇಷ್ಟಪಟ್ಟಿದ್ದಾರೆ. ಗೂಳಿ ಎದ್ದು ರಸ್ತೆಯ ಇನ್ನೊಂದು ಬದಿಗೆ ಓಡಿಹೋದ ನಂತರ ಹೋರಾಟ ಕೊನೆಗೊಳ್ಳುತ್ತದೆ.
ಜನರು ವಿಡಿಯೋವನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಮನುಷ್ಯರು ಮಾತ್ರವಲ್ಲದೇ ನಡುರಸ್ತೆಯಲ್ಲಿ ಗೂಳಿಗಳೂ ಜಗಳವಾಡಬಲ್ಲುದು ಎಂದು ಇದು ತೋರಿಸುತ್ತದೆ. ಮನುಷ್ಯರಿಗೂ, ಇದಕ್ಕೂ ವ್ಯತ್ಯಾಸವೇ ಇಲ್ಲ ಎಂದು ಹಲವರು ತಮಾಷೆಯಾಗಿ ಬರೆದಿದ್ದಾರೆ.
https://www.youtube.com/watch?v=BXSBhtiaQkI&embeds_euri=https%3A%2F%2Fwww.news18.com%2F&feature=emb_logo