ಒಮ್ಮೆ ನೋಡಿ ಬನ್ನಿ ಚತುರ್ಥ ಮಂತ್ರಾಲಯ ಪುಣ್ಯಸ್ಥಳ

ಚತುರ್ಥ ಮಂತ್ರಾಲಯ ಎಂಬ ಖ್ಯಾತಿಗೆ ಪಾತ್ರವಾದ ಸ್ಥಳ ಪುಣ್ಯ ಸ್ಥಳ. ಪುಣ್ಯಸ್ಥಳದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠವಿದ್ದು, ಸುತ್ತಮುತ್ತ ಗಣಪತಿ, ನವಗ್ರಹ, ಸುಬ್ರಮಣ್ಯ, ಕಾಲಭೈರವ, ಶ್ರೀರಾಮ, ಸತ್ಯನಾರಾಯಣ, ಶ್ರೀ ಕೃಷ್ಣ , ದುರ್ಗಾ ಪರಮೇಶ್ವರಿ, ವೆಂಕಟೇಶ್ವರ ಹೀಗೆ ಎಲ್ಲಾ ದೇವಾನುದೇವತೆಗಳ ವಿಗ್ರಹವಿರುವ ಪುಟ್ಟ ಪುಟ್ಟ ಸುಂದರವಾದ ದೇವಾಲಯಗಳಿವೆ.

ಸುಮಾರು 2 ಎಕರೆವರೆಗೂ ಗುಡ್ಡದ ಮೇಲೆ ವಿಸ್ತಾರಗೊಂಡಿದ್ದು, ಅಂತ್ಯದಲ್ಲಿ ದೀಪ ಸ್ಥಂಭವಿದೆ, ಭಕ್ತ ಪ್ರವಾಸಿಗರು ಒಂದು ದಿನದ ಮಟ್ಟಿಗೆ ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಿಂದ ಸುಮಾರು 20 ಕಿ.ಮೀ. ಸಾಗಿದರೆ ಬಸವಾಪಟ್ಟಣದ ಮೂಲಕ ಪುಣ್ಯಸ್ಥಳ ತಲುಪಬಹುದು, ಊಟ, ತಿಂಡಿ ತಯಾರಿಸಿಕೊಂಡು ಒಂದು ದಿನ ಆರಾಮಾಗಿ ಸುತ್ತಾಡಿ ನೋಡಬಹುದಾದ ಸ್ಥಳ ಪುಣ್ಯಸ್ಥಳ.

punya stala

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read