ನವದೆಹಲಿ: ಪದ್ಮನಾಭ ಗೋಪಿನಾಥ್ ಎಂಬ ಯುವ ವಿದ್ಯಾರ್ಥಿ ಬ್ರಿಟನ್ ಮಹಿಳೆಯೊಬ್ಬರು ಆಯೋಜಿಸಿದ್ದ ಹೈಸ್ಕೂಲ್ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 1957 ರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಇವರು ಈ ವಿಡಿಯೋವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಟ್ಯಾಗ್ ಮಾಡಿ ಪದ್ಮನಾಭ್ ಗೋಪಿನಾಥ್ ಅವರು ಎಲ್ಲಿದ್ದಾರೆಂದು ತಿಳಿಯಬೇಕೆಂದು ಕೇಳಿಕೊಂಡಿದ್ದಾರೆ.
ಈ ಹಳೆಯ ವಿಡಿಯೋದಲ್ಲಿ ಪದ್ಮನಾಭ್ ಗೋಪಿನಾಥ್ ಅವರು ಇತಿಹಾಸದ ಕೆಲವು ತಿರುಚಿದ ಪುಟಗಳ ಬಗ್ಗೆ ಚರ್ಚಾ ಸ್ಪರ್ಧೆಯಲ್ಲಿ ವಿವರಣೆ ನೀಡುತ್ತಿದ್ದರು. ಮ್ಯಾಗ್ನಾ ಕಾರ್ಟಾಕ್ಕೆ ಸಹಿ ಹಾಕಿದ ನಂತರ ಇತಿಹಾಸವು ಪ್ರಾರಂಭವಾಯಿತು ಎಂದು ಭಾವಿಸುವ ಮೂಲಕ ಇಂಗ್ಲಿಷರು ಉದ್ದೇಶಪೂರ್ವಕವಾಗಿ ಅಜ್ಞಾನಿಗಳಾಗಿದ್ದಾರೆ ಎಂದು ಪದ್ಮನಾಭ್ ಅವರು ಚರ್ಚೆಯಲ್ಲಿ ಹೇಳಿದರು, ಆದರೆ ಇದು 3000 ವರ್ಷಗಳ ಹಿಂದೆ ಆಂಗ್ಲೋ ಸ್ಯಾಕ್ಸನ್ ಬೇಟೆಗಾರರಾಗಿದ್ದಾಗ ಪ್ರಾರಂಭವಾಯಿತು ಎಂದು ಅವರು ತಿಳಿಸುತ್ತಿದ್ದರು.
’57ರ ದಶಕದಲ್ಲಿ ಭಾರತದ ಯಾರೋ ಒಬ್ಬರು ಇಷ್ಟು ಹುರುಪಿನಿಂದ ಚಾಂಪಿಯನ್ ಆಗಿರುವುದನ್ನು ನೋಡಲು ಅದ್ಭುತವಾಗಿದೆ’ ಎಂದು ಆನಂದ್ ಮಹೀಂದ್ರಾ ಬರೆದಿದ್ದಾರೆ. ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್ ಅವರು, “ನಾನು ಆಗ ಹುಟ್ಟಿದ್ದೆ. ಇವರು ಐಎಲ್ಒನ ಸ್ಟಾರ್ ಅಧಿಕಾರಿಯಾಗಿ ಈಗ ನಿವೃತ್ತರಾಗಿದ್ದಾರೆ, ಆದರೆ ಎಲ್ಲಿ ಇದ್ದಾರೆ ಎನ್ನುವುದು ತಿಳಿದಿಲ್ಲ“ ಎಂದಿದ್ದಾರೆ.