ತರಕಾರಿ ಬುಟ್ಟಿಯಲ್ಲಿ ನವಜಾತ ಶಿಶುವನ್ನಿಟ್ಟು ಪರಾರಿ….!

ತರಕಾರಿ ಬುಟ್ಟಿಯಲ್ಲಿ ನವಜಾತ ಶಿಶುವನ್ನಿಟ್ಟು ಅಪರಿಚಿತರು ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಕ್ಕಮರಳ್ಳಿ ಗೇಟ್ ಬಳಿ ಶನಿವಾರದಂದು ನಡೆದಿದೆ.

ಮಂಡ್ಯ – ಪಾಂಡವಪುರ ರಸ್ತೆಯಲ್ಲಿರುವ ಲೋಕ ಪಾವನಿ ನದಿ ಬ್ರಿಡ್ಜ್ ಪಕ್ಕದಲ್ಲಿದ್ದ ಆಲದ ಮರದ ಬುಡದಲ್ಲಿ ಈ ತರಕಾರಿ ಬುಟ್ಟಿ ಕಂಡುಬಂದಿದ್ದು, ಅನುಮಾನಗೊಂಡ ಸಾರ್ವಜನಿಕರು ಪರಿಶೀಲಿಸಿದ ವೇಳೆ ನವಜಾತ ಶಿಶು ಪತ್ತೆಯಾಗಿದೆ.

ಕೂಡಲೇ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅವರು ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದರು. ಅಲ್ಲಿ ತಪಾಸಣೆ ನಡೆಸಿದ ವೇಳೆ ಮಗುವಿಗೆ ಜಾಂಡಿಸ್ ರೋಗಲಕ್ಷಣ ಕಂಡು ಬಂದ ಕಾರಣ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಿ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read