ಮದುವೆಗಳು ವಿನೋದದಿಂದ ತುಂಬಿದ ಮತ್ತು ಸಂತೋಷದಾಯಕ ಸಂದರ್ಭವಾಗಿದೆ. ಪ್ರತಿಯೊಬ್ಬರೂ ಯಾವುದೇ ಬಿಕ್ಕಟ್ಟುಗಳಿಲ್ಲದೆ ಸುಂದರವಾದ, ದೋಷರಹಿತ ಮತ್ತು ಪ್ರೀತಿಯ ವಿವಾಹಕ್ಕಾಗಿ ಆಶಿಸುತ್ತಾರೆ. ಆದರೆ ಕೆಲವೊಮ್ಮೆ ಅದು ಉಲ್ಟಾ ಆಗುತ್ತದೆ. ಅಂಥದ್ದೇ ಒಂದು ವಿಚಿತ್ರ ಘಟನೆ ಫಿಲಿಪ್ಪೀನ್ಸ್ನಲ್ಲಿ ನಡೆದಿದ್ದು, ಅದೀಗ ವೈರಲ್ ಆಗಿದೆ.
ವಧುವಿನ ಪ್ರವೇಶದ ಮೊದಲು ಹಳೆಯ ಚರ್ಚ್‌ನ ಬಾಗಿಲುಗಳು ಜಾಮ್ ಆಗಿದ್ದು, ವಧು ಬರಲು ಪರದಾಡಿದ ಘಟನೆ ನಡೆದಿದೆ. ವೈರಲ್ ಪ್ರೆಸ್ ಬಿಡುಗಡೆ ಮಾಡಿದ ತಮಾಷೆಯ ವಿವಾಹದ ವಿಡಿಯೋದಲ್ಲಿ ವಧು ತಾಳ್ಮೆಯಿಂದ ನಿಂತಿರುವುದನ್ನು ನೋಡಬಹುದು.
ಈವೆಂಟ್ ಸಂಯೋಜಕರು ತಮ್ಮ ಎಲ್ಲಾ ಶಕ್ತಿಯಿಂದ ಬಾಗಿಲು ಎಳೆಯುವುದನ್ನು ಕಾಣಬಹುದು. ಇದು 10 ಸೆಕೆಂಡುಗಳವರೆಗೆ ಮುಂದುವರಿಯುತ್ತದೆ. ಆದಾಗ್ಯೂ, ಯೋಜಕರು ವಿಫಲರಾಗುತ್ತಾರೆ. ಮತ್ತು ಸಹಾಯಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನು ಕರೆಯುತ್ತಾರೆ.
ವಧು, ಘಿ ಆನ್ನೆ ಮೇರಿ ಸಿಯೊಕೊ ಸಹನೆಯಿಂದ ಕಾಯುವುದನ್ನೂ ವಿಡಿಯೋದಲ್ಲಿ ನೋಡಬಹುದು. ಅರ್ಧ ನಿಮಿಷಗಳ ಬಳಿಕ ಅದೃಷ್ಟವಶಾತ್ ಬಾಗಿಲು ತೆರೆದು ವಧು ಒಳಕ್ಕೆ ಬಂದಳು. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.