ನಟಿ ಶೃತಿ ಕುಟುಂಬ ಸಿನಿಮಾದಲ್ಲೇ ತೊಡಗಿಸಿಕೊಂಡವರು. ಈಗಾಗಲೇ ಸಿನಿಮಾ ರಂಗದಲ್ಲೇ ದೊಡ್ಡ ಹೆಸರು ಮಾಡಿರುವ ನಟಿ ಶೃತಿ ಹಾಗೂ ಶರಣ್ ಮನೆ ಮಾತಾದವರು. ಶರಣ್ ಪುತ್ರ ಕೂಡ ಗುರು ಶಿಷ್ಯರು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಈ ಕುಟುಂಬದ ಮತ್ತೊಂದು ಕುಡಿ ಸಿನಿಮಾ ರಂಗಕ್ಕೆ ಪ್ರವೇಶ ಪಡೆಯುತ್ತಿದೆ.
ಹೌದು, ನಟ ಶರಣ್ ಅವರ ಕಿರಿಯ ಸಹೋದರಿ ಮಗಳು ಇದೀಗ ಸಿನಿಮಾಕ್ಕೆ ಪಾದಾರ್ಪಣೆ ಮಾಡ್ತಾ ಇದ್ದಾರೆ. ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕೀರ್ತಿ, ಧರಣಿ ಎಂಬ ಸಿನಿಮಾ ಮೂಲಕ ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ. ಮನೋಜ್ ನಾಯಕನಾಗಿ ನಟಿಸುತ್ತಿರುವ ಈ ಧರಣಿ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ.
ಕೋಳಿ ಪಂದ್ಯದ ಜೊತೆಗೆ ಕಾಡುವ ಕಥೆ ಈ ಸಿನಿಮಾದ ತಿರುಳು. ಅನಂತು ವರ್ಸಸ್ ನುಸ್ರತ್ ಖ್ಯಾತಿಯ ಸುಧೀರ್ ಶಾನುಭೋಗ್ ಧರಣಿ ಚಿತ್ರವನ್ನು ನಿರ್ದೇಶನ ಮಾಡ್ತಾ ಇದ್ದಾರೆ. ಇನ್ನು ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಅವರು ನಿರ್ಮಿಸುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ನೀಡಿದರೆ, ಅರುಣ್ ಸುರೇಶ್ ಛಾಯಾಗ್ರಹಣ ಮಾಡಿದ್ದಾರೆ.
ಅರುಣೋದಯ ಕಥೆ , ಶ್ರೀನಿಧಿ ಡಿ ಎಸ್ ಸಂಭಾಷಣೆ ಹಾಗೂ ಡಾ. ವಿ.ನಾಗೇಂದ್ರ ಪ್ರಸಾದ್ ಹಾಗೂ ಶಿವಕುಮಾರ್ ಮಾವಲಿ ಸಾಹಿತ್ಯ, ಟೈಗರ್ ಶಿವು ಸಾಹಸ ಸಂಯೋಜನೆ ಇದೆ. ಪೋಸ್ಟರ್ ನಿಂದಲೇ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಸಿನಿಮಾ ಹೇಗಿದೆ ಅನ್ನೋದನ್ನ ರಿಲೀಸ್ ನಂತರ ನೋಡಬೇಕಾಗಿದೆ.