ಅಂಗಡಿಗೆ ನುಗ್ಗಿ ದರೋಡೆ ಮಾಡಿದ ಐವರ ತಂಡ: ಭಯಾನಕ ವಿಡಿಯೋ ವೈರಲ್​

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್‌ನಲ್ಲಿರುವ ಅಂಗಡಿಗೆ ನುಗ್ಗಿದ ಐವರು ಶಸ್ತ್ರಸಜ್ಜಿತ ದರೋಡೆಕೋರರು ಅಂಗಡಿಯನ್ನು ಲೂಟಿ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ. ಇದು ಯಾವಾಗ ಎಂಬ ದಿನಾಂಕವು ಸ್ಪಷ್ಟವಾಗಿ ನಮೂದಾಗಿಲ್ಲ.

ಆದರೆ ಐವರು ದರೋಡೆಕೋರರ ಪೈಕಿ ಮೂವರು ಮುಸುಕುಧಾರಿಗಳಾಗಿದ್ದು, ಎಲ್ಲರೂ ಕಪ್ಪು ಬಟ್ಟೆ ಧರಿಸಿದ್ದಾರೆ. ಅವರು ಕ್ಯಾಶ್ ಕೌಂಟರ್ ಅನ್ನು ಸಮೀಪಿಸುತ್ತಾರೆ ಮತ್ತು ಸ್ವಲ್ಪ ಸಮಯದವರೆಗೆ ಅಲ್ಲಿಯೇ ನಿಂತುಕೊಂಡು ಅತ್ತ ಇತ್ತ ನೋಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ನಂತರ ದರೋಡೆಕೋರರು ಕ್ಯಾಶ್ ಟ್ರೇ ಅನ್ನು ತೆರೆದು ಕ್ಯಾಷಿಯರ್ ಕಡೆಗೆ ಗನ್ ತೋರಿಸಿ ಹಣವನ್ನು ಲೂಟಿ ಮಾಡಿಕೊಂಡು ಹೋಗಿದ್ದಾರೆ.
ಇದನ್ನು ಗಮನಿಸಿದರೆ ದರೋಡೆಕೋರರು ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ. ನಾಲ್ವರು ದರೋಡೆಕೋರರು ನಗದು ತಟ್ಟೆಯಿಂದ ಹಣವನ್ನು ದೋಚಿದರೆ, ಐದನೆಯವನು ಅದರ ಬದಿಯಿಂದ ಬಿಲ್ಲಿಂಗ್ ಡೆಸ್ಕ್ ಅನ್ನು ಹತ್ತಿ ಅಲ್ಲಿರುವ ಇತರ ವಸ್ತುಗಳನ್ನು ದರೋಡೆ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನು ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

https://twitter.com/ClownWorld_/status/1618061453952708609?ref_src=twsrc%5Etfw%7Ctwcamp%5Etweetembed%7Ctwterm%5E1618061453952708609%7Ctwgr%5Eb41e026dc64b93967b84b3f911076c22ec9627dd%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fcalifornia-5-armed-robbers-loot-convenience-store-in-oakland-cctv-footage-emerges

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read