ಬಾಲಿವುಡ್ ಹಾಸ್ಯನಟ ಜಾನಿ ಲಿವರ್ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮದೇ ಆಗಿರೋ ಮ್ಯಾನರಿಸಂ ಇಟ್ಟಕೊಂಡು ಜನರನ್ನ ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುವ ಕಲೆಗಾರ. ಇದೇ ಜಾನಿ ಲಿವರ್ ಮಗಳು ಜೆಮಿ ಲಿವರ್ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ವಿಡಿಯೊದಲ್ಲಿ ಜೆಮಿ ಲಿವರ್ ನಟಿ ಪ್ರಿಯಾಂಕಾ ಛೋಪ್ರಾ, ನಟಿ ಸೋನಂ ಕಪೂರ್, ನಟಿ ಕರೀನಾ ಕಪೂರ್ ಹಾಗೂ ನಿರ್ದೆಶಕಿ ಫರ್ಹಾ ಖಾನ್ ಅವರ ಮಿಮಿಕ್ರಿ ಮಾಡಿ ತೋರಿಸಿದ್ದಾರೆ. ಈ ಮೂವರಿಗೂ ಪುಟ್ಟ ಪುಟ್ಟ ಮಕ್ಕಳಿದ್ದು, ಅವರು ತಮ್ಮ ಮಕ್ಕಳನ್ನ ಹೇಗ್ಹೇಗೆ ಮಲಗಿಸುತ್ತಾರೆ. ಆ ಸಮಯದಲ್ಲಿ ಅವರು ಏನೇನು ಹೇಳ್ಬಹುದು ಅನ್ನೊದನ್ನ, ಇಲ್ಲಿ ಮಿಮಿಕ್ರಿ ಮಾಡಿ ತೋರಿಸಲಾಗಿದೆ. ಈ ವಿಡಿಯೋ ನೆಟ್ಟಿಗರು ನೋಡಿ ಎಂಜಾಯ್ ಮಾಡುತ್ತಿದ್ದಾರೆ.
ಕರೀನಾ ಕಪೂರ್, ಪ್ರಿಯಾಂಕಾ ಛೋಪ್ರಾ, ಸೋನಂ ಕಪೂರ್, ಈ ಮೂವರೂ ನಟಿಯರು ಮಾತನಾಡುವ ಶೈಲಿಯನ್ನ ಜೆಮಿ ಯಥಾವತ್ ಕಾಪಿ ಮಾಡಿ ಮಾತನಾಡಿದ್ದಾರೆ. ಇನ್ನೂ ಫರ್ಹಾ ಖಾನ್ ಸ್ಟೈಲ್ ನೋಡಿದ್ರಂತೂ ಯಾರಿಂದಲೂ ನಗು ತಡೆದುಕೊಳ್ಳೊದಕ್ಕಾಗೊಲ್ಲ ಆ ರೀತಿ ಕಾಪಿ ಮಾಡಿದ್ದಾರೆ ಜೆಮಿ.
ಜೆಮಿ, ತಂದೆ ಜಾನಿ ಲಿವರ್ ರಂತೆಯೇ ನಗಿಸೋದ್ರಲ್ಲಿ ಪಂಟರ್ ಆಗಿದ್ದಾರೆ. ಇವರು ಕೆಲ ಸಿನೆಮಾಗಳಲ್ಲೂ ಜನರನ್ನ ರಂಜಿಸಿದ್ದಾರೆ. ಇನ್ನೂ ಜೆಮಿ ಗಾಯಕಿ ಆಶಾಬೋಸ್ಲೆಯವರ ಮಿಮಿಕ್ರಿ ಮಾಡುವುದ್ರಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇವರ ಈ ರೀತಿಯ ಇನ್ನೂ ಅನೇಕ ಕಾಮಿಡಿ ವಿಡಿಯೋಗಳು ಆಗಾಗ ವೈರಲ್ ಆಗ್ತಾನೇ ಇರುತ್ತೆ. ಅಂತಹ ವಿಡಿಯೋಗಳಲ್ಲಿ ಇದೂ ಒಂದಾಗಿದೆ.
It’s #Bollywood nap time! pic.twitter.com/uP23gq9fYs
— Jamie Lever (@Its_JamieLever) January 25, 2023
Jamieeeeee 😂😂😂
— TheFarahKhan (@TheFarahKhan) January 25, 2023
It’s jaldi soh jaao nai toh Chhittar ( chappals) padenge – in chaste punjabi for us😂
— Tahira Kashyap Khurrana (@tahira_k) January 25, 2023
Hahahahahahaha 🤣🤣🤣🤣🤣
Tooooo good!— Sushant Mehta (@SushantNMehta) January 25, 2023
just wow…. Spcly Sonam 😁😁
— Rohit Jaiswal (@rohitjswl01) January 25, 2023
Hehehe farah khan😆
— meanmeen🦄 (@_mistletoe_29) January 26, 2023
Amazing kareena kapoor acting
100%Missing old 2000 Golden era actress kareena kapoor movies
— Sanket Bonde (@sanketbonde7) January 25, 2023