ಭೂತ. ಆತ್ಮ, ಪ್ರೇತ, ಪಿಶಾಚಿಗಳೆಲ್ಲಾ ಇದೆಯೋ, ಇಲ್ಲವೋ ಎಂಬ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ವಾದ. ಆದರೆ ಇಲ್ಲೊಬ್ಬ ವ್ಯಕ್ತಿ ತಾವು ಮನೆಯ ನೆಲಮಾಳಿಗೆಯಲ್ಲಿ ಮಗುವಿನ ಧ್ವನಿಯನ್ನು, ಅದು ನಗುವುದನ್ನು ಕೇಳಿರುವುದಾಗಿ ಹೇಳಿಕೊಂಡಿದ್ದು, ಅದರ ವಿಡಿಯೋ ಶೇರ್ ಮಾಡಿದ್ದಾರೆ.
ನೆಲಮಾಳಿಗೆಯು ಮಂದವಾಗಿ ಬೆಳಗುತ್ತಿತ್ತು. ಅಲ್ಲಿ ಮಗುವಿನ ನಗು ಕೇಳಿಸುತ್ತಿತ್ತು. ಆ ಸಂದರ್ಭದಲ್ಲಿ ನಾನು ಲಾಂಡ್ರಿಗೆ ಕೊಡಲು ಬಟ್ಟೆ ತೆಗೆಯುತ್ತಿದ್ದೆ. ಆದರೆ ಆಗಲೇ ಈ ಶಬ್ದ ಕೇಳಿ ಭಯಭೀತನಾದೆ. ಇದನ್ನು ಫೋನ್‌ನಲ್ಲಿ ರೆಕಾರ್ಡ್ ಮಾಡಿದೆ. ಯಾರೋ ಬಾಗಿಲು ಮುಚ್ಚಿದರು, ಲೈಟ್ ಆಫ್ ಮಾಡಿದರು ಮತ್ತು ಅವರು ಲಾಂಡ್ರಿಯಲ್ಲಿ ಹಾಕಲು ಬಯಸಿದ ಬಟ್ಟೆಗಳನ್ನು ತುಂಬಿದ ಬುಟ್ಟಿಯನ್ನು ಕೆಡವಿದರು ಎಂದು ಅವರು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಡಿದ ವಿಡಿಯೋದಲ್ಲಿ ನಿಜವಾಗಿಯೂ ಹಿನ್ನೆಲೆಯಲ್ಲಿ ಧ್ವನಿಯನ್ನು ಕೇಳಬಹುದು. ಇದು ಮಗುವಿನಂತೆ ಧ್ವನಿಸುತ್ತದೆ ಮತ್ತು ನಾನು ಅಲ್ಲಿಗೆ ಹೋಗಬೇಕೆಂದು ಅದು ಬಯಸುವಂತೆ ಹೇಳುವ ಸೌಂಡ್ ಕೇಳಬಹುದು. ಇದು ಬೆಕ್ಕು ಇದ್ದಿರಬಹುದು ಎಂದು ಕೆಲವರು ಕೇಳಿದ್ದರೆ, ಇದನ್ನು ಕೇಳಿ ಹಲವರು ಬೆಚ್ಚಿ ಬಿದ್ದಿದ್ದಾರೆ.
https://www.youtube.com/watch?v=Kkj5aYVSIks