‘ಪಠಾಣ್’ ಸಿನಿಮಾ‌ ಬಿಡುಗಡೆ; ನಿಲ್ಲದ ವಿರೋಧ ಮುಂದುವರೆದ ಪ್ರತಿಭಟನೆ..!

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಇಂದು ತೆರೆ ಕಂಡಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ವಿರೋಧ ವ್ಯಕ್ತವಾಗಿತ್ತು. ಬೇಷರಮ್ ರಂಗ್ ಹಾಡಿಗೆ ದೊಡ್ಡ ಮಟ್ಟದ ವಿರೋಧಗಳ ನಡುವೆ, ಪ್ರತಿಭಟನೆಗಳು ಕೂಡ ನಡೆದಿದ್ದವು. ಸಿನಿಮಾ ಬಿಡುಗಡೆ ಆಗಬಾರದು ಅಂತ ಕೆಲವು ಕಡೆ ಹೋರಾಟಗಳು ಮುಂದುವರೆದಿದ್ದವು. ಇದೆಲ್ಲದರ ಮಧ್ಯೆ ಸಿನಿಮಾ ಇಂದು ಬಿಡುಗಡೆ ಆಗಿದೆ.

ಅತ್ತ ಸಿನಿಮಾ ಬಿಡುಗಡೆ ಆಗಿದ್ದರೆ, ಇತ್ತ ಅನೇಕ ಕಡೆ ಪ್ರತಿಭಟನೆ ಮುಂದುವರೆದಿವೆ. ಭೋಪಾಲ್‌ನ ರಂಗ್ ಮಹಲ್ ಚಿತ್ರಮಂದಿರದ ಹೊರಗೆ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ‌. ಅನೇಕ ಬಲಪಂಥೀಯ ಸಂಘಟನೆಗಳು ಚಿತ್ರಮಂದಿರದ ಹೊರಗೆ ಹನುಮಾನ್ ಚಾಲೀಸ್ ಪಠಣ ಮಾಡಿದ್ದಾರೆ.

ಇನ್ನು ಇಂದೋರ್‌ನಲ್ಲಿಯೂ ಪ್ರತಿಭಟನೆಗೆ ಜೋರಾಗಿ ನಡೆದಿದೆ. ವಿಶ್ವ ಹಿಂದೂ ಪರಿಷತ್ ಸದಸ್ಯರು ಸಂಗೀತಾ ಚಿತ್ರಮಂದಿರದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ‌. ಚಿತ್ರಮಂದಿರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಇನ್ನು ಗ್ವಾಲಿಯರ್ ನಲ್ಲೂ ಕೂಡ ಪ್ರತಿಭಟನೆ ನಡೆಸಲಾಯಿತು. ಇದೆಲ್ಲದರ ಮಧ್ಯೆಯೂ ಈ ಸಿನಿಮಾಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read