ಹೆಚ್ಚಿನವರ ದೈನಂದಿನ ಜೀವನದಲ್ಲಿ ಚಹ ಅತ್ಯಂತ ಅವಶ್ಯಕವಾದ ಪಾನೀಯವಾಗಿದೆ. ಉತ್ತರಾಖಂಡದ ಫುಡ್ ಬ್ಲಾಗರ್ ಒಬ್ಬರು ‘ತೆಂಗಿನ ಚಹಾ’ ಪಾಕವಿಧಾನವನ್ನು ಹಂಚಿಕೊಂಡಿದ್ದು, ಜನರು ಹುಬ್ಬೇರಿಸುತ್ತಿದ್ದಾರೆ.
ಉತ್ತರಾಖಂಡದ ಹಲ್ದ್ವಾನಿಯ ಆಹಾರ ಬ್ಲಾಗರ್ ಕವಿತಾ ರೈ ಅವರು ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ, ವಿಡಿಯೋದಲ್ಲಿ ತೆಂಗಿನ ಚಿಪ್ಪಿನಲ್ಲಿ ಚಹ ಮಾಡುವ ಪಾಕವಿಧಾನವನ್ನು ನೋಡಬಹುದು.
ಒಲೆಯ ಮೇಲೆ ಸ್ವಚ್ಛ ತೆಂಗಿನ ಚಿಪ್ಪನ್ನು ಇಡುತ್ತಿರುವ ರೈ ಅವರ ಕ್ಲೋಸ್-ಅಪ್ ಶಾಟ್‌ನೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಆಕೆ ಟೀ ಪೌಡರ್, ನೀರು ಮತ್ತು ಸಕ್ಕರೆಯನ್ನು ಹಾಕಿ ಚಹ ತಯಾರಿಸಿದ್ದನ್ನು ನೋಡಬಹುದು.
ವಿಡಿಯೋ 873k ಲೈಕ್‌ಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಜನರು ಪಾಕವಿಧಾನದ ಬಗ್ಗೆ ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ. ತೆಂಗಿನ ಚಿಪ್ಪು ಬಳಸಿ ಮಾಡುವುದು ಅಪಾಯ ಎಂದು ಕೆಲವರು ಸೂಚಿಸಿದ್ದರೆ, ಹಲವರು ಇದಕ್ಕೆ ಭೇಷ್ ಎಂದಿದ್ದಾರೆ.
https://youtu.be/qBMRhaI20qc