ಮಧ್ಯಪ್ರದೇಶದ ಇಂದೋರ್ ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಭರ್ಜರಿ ಜಯಗಳಿಸಿದೆ.
ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಐಸಿಸಿ ರ್ಯಾಂಕಿಂಗ್ ನಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೆ ಏರಿದೆ.
ಮೂರು ಪಂದ್ಯಗಳ ಸರಣಿಯನ್ನು 3 -0 ಅಂತರದಿಂದ ಟೀಂ ಇಂಡಿಯಾ ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧ 90 ರನ್ ಗಳ ಜಯಭೇರಿ ಬಾರಿಸಿದೆ
ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿತು. ರೋಹಿತ್ ಶರ್ಮಾ 101, ಶುಭಮನ್ ಗಿಲ್ 112, ವಿರಾಟ್ ಕೊಹ್ಲಿ 36, ಹಾರ್ದಿಕ್ ಪಾಂಡ್ಯ 54 ರನ್ ಗಳಿಸಿದರು. ನ್ಯೂಜಿಲೆಂಡ್ ಪರವಾಗಿ ಜಾಕೋಬ್ ಡುಫಿ 3, ಬ್ಲೇರ್ ಟಿಕ್ನರ್ 3 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 41.2 ಓವರ್ ಗಳಲ್ಲಿ 295 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಡೆವಾನ್ ಕಾನ್ವೆ 138, ಹೆನ್ರಿ ನಿಕೋಲಸ್ 42, ಮಿಚೆಲ್ ಸ್ಯಾಟ್ನರ್ 34 ರನ್ ಗಳಿಸಿದರು. ಭಾರತದ ಪರವಾಗಿ ಶಾರ್ದುಲ್ ಠಾಕೂರ್ 3, ಕುಲದೀಪ್ ಯಾದವ್ 3, ಯಜುಯೇಂದ್ರ ಚಾಹಲ್ 2 ವಿಕೆಟ್ ಪಡೆದರು.