ಮುಂಬೈ ಅಗ್ನಿಶಾಮಕ ದಳದ ನೇಮಕಾತಿ ಪ್ರಕ್ರಿಯೆ ವೇಳೆ ಒದಗಿಸಿದ ಕಳಪೆ ಸೇಫ್ಟಿ ನೆಟ್ ನಿಂದ 100 ಮಂದಿ ತೀವ್ರವಾಗಿ ಗಾಯಗೊಂಡಿರೋ ಘಟನೆ ನಡೆದಿದೆ.
ನೇಮಕಾತಿ ಪ್ರಕ್ರಿಯೆಯು ಮೂರು ನಿಮಿಷಗಳಲ್ಲಿ 800 ಮೀ ಓಡುವುದು, 20 ಪುಲ್-ಅಪ್ಗಳನ್ನು ಮಾಡುವುದು ಮತ್ತು 19 ಅಡಿ ಎತ್ತರದಿಂದ ಜಿಗಿಯುವುದನ್ನು ಒಳಗೊಂಡಿದೆ.
ಭೌತಿಕ ಪರೀಕ್ಷೆ ವೇಳೆ ಅಭ್ಯರ್ಥಿಗಳನ್ನು 19 ಅಡಿ ಎತ್ತರದಿಂದ ಜಿಗಿಯಲು ಸೂಚಿಸಲಾಗಿದೆ. ಈ ವೇಳೆ ಕೆಳಗೆ ನಿತಿದ್ದ ಅಗ್ನಿಶಾಮಕ ಸಿಬ್ಬಂದಿ ದೊಡ್ಡ ಕ್ಯಾನ್ವಾಸ್ ಶೀಟ್ ಅನ್ನು ಸುರಕ್ಷತಾ ಜಾಲವಾಗಿ ಹಿಡಿದಿದ್ದಾರೆ. ಕ್ಯಾನ್ವಾಸ್ನ ಗುಣಮಟ್ಟವು ಕಳಪೆಯಾಗಿದ್ದರಿಂದ ಜಂಪ್ ಮಾಡಿದ ಉದ್ಯೋಗಾಕಾಂಕ್ಷಿಗಳು ಗಾಯಗೊಂಡಿದ್ದಾರೆ.
ಮುಂಬೈ ಅಗ್ನಿಶಾಮಕ ಸೇವೆಗೆ 1,200 ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಪ್ರಸ್ತುತ ಮುಂಬೈನಲ್ಲಿ 910 ಹುದ್ದೆಗಳನ್ನು ತೆರೆಯಲಾಗಿದ್ದು, ಇದುವರೆಗೆ ಸುಮಾರು 20,000 ಪುರುಷರು ಅರ್ಜಿ ಸಲ್ಲಿಸಿದ್ದಾರೆ.