alex Certify ಮೊಟ್ಟೆಯ ಪ್ರೋಟೀನ್‌ಗೆ ಸರಿಸಮ 100 ಗ್ರಾಂ ಹುರುಳಿ ಕಾಳು: ಕಿಡ್ನಿ ಸ್ಟೋನ್‌ ಸಮಸ್ಯೆಗೂ ಇದು ರಾಮಬಾಣ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆಯ ಪ್ರೋಟೀನ್‌ಗೆ ಸರಿಸಮ 100 ಗ್ರಾಂ ಹುರುಳಿ ಕಾಳು: ಕಿಡ್ನಿ ಸ್ಟೋನ್‌ ಸಮಸ್ಯೆಗೂ ಇದು ರಾಮಬಾಣ…..!

ಬೇಳೆ ಕಾಳುಗಳಲ್ಲಿ ಸಾಕಷ್ಟು ವೆರೈಟಿ ಇದೆ. ಬಹುತೇಕ ಎಲ್ಲವೂ ಆರೋಗ್ಯಕ್ಕೆ ಪ್ರಯೋಜನಕಾರಿ. ಅವುಗಳಲ್ಲಿ ಪ್ರೋಟೀನ್‌ ಪ್ರಮಾಣ ಹೆಚ್ಚಾಗಿರುವುದರಿಂದ ನಿಯಮಿತವಾಗಿ ಸೇವನೆ ಮಾಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಹುರುಳಿ ಕಾಳು ಅತ್ಯಂತ ಪೋಷಕಾಂಶಭರಿತವಾಗಿದೆ. ಹುರುಳಿ ಕಾಳುಗಳಿಂದ ನೀವು ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದು.

ಹುರುಳಿ, ನಗರಗಳಲ್ಲಿ ಹೆಚ್ಚು ಜನಪ್ರಿಯವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಇದನ್ನು ತಪ್ಪದೇ ಸೇವಿಸುತ್ತಾರೆ. ಜಾರ್ಖಂಡ್, ಛತ್ತೀಸ್‌ಗಢ ಮತ್ತು ಒಡಿಶಾದ ಹಲವು ಪ್ರದೇಶಗಳಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತದೆ.

ಹುರುಳಿಯನ್ನು ಔಷಧವಾಗಿಯೂ ಬಳಸಲಾಗುತ್ತದೆ. ಪ್ರೋಟೀನ್‌, ಖನಿಜಗಳು ಮತ್ತು ವಿಟಮಿನ್‌ಗಳ ಜೊತೆಗೆ, ಫೀನಾಲಿಕ್ ಆಮ್ಲ, ಫ್ಲೇವನಾಯ್ಡ್‌ಗಳು ಮತ್ತು ಟ್ಯಾನಿಂಗ್‌ನಂತಹ ಜೈವಿಕ ಸಕ್ರಿಯ ಪದಾರ್ಥಗಳು ಸಹ ಇದರಲ್ಲಿ  ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಎಲ್ಲಾ ಪದಾರ್ಥಗಳು ಮೂಲದಿಂದಲೇ ಅನೇಕ ರೋಗಗಳನ್ನು ನಿರ್ಮೂಲನೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಹುರುಳಿ ಕಾಳುಗಳು ಸಹಾಯ ಮಾಡುತ್ತವೆ ಎಂಬುದು  ಅನೇಕ ಸಂಶೋಧನೆಗಳಲ್ಲಿ ಬಹಿರಂಗವಾಗಿದೆ. ಇದಲ್ಲದೇ ಮಲಬದ್ಧತೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಆಯುರ್ವೇದದ ಪ್ರಕಾರ ಹುರುಳಿ ಕಾಳು ಪಿತ್ತಕೋಶದಲ್ಲಿ ಹೆಪ್ಪುಗಟ್ಟಿದ ಕಲ್ಲುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹುರುಳಿಯನ್ನು ನಿಯಮಿತವಾಗಿ ಸೇವನೆ ಮಾಡಿದ್ರೆ ಕ್ಯಾನ್ಸರ್ ಅಪಾಯ ಕೂಡ ಕಡಿಮೆಯಾಗುತ್ತದೆ. 100 ಗ್ರಾಂ ಹುರುಳಿಕಾಳಿನಲ್ಲಿರುವ ಪೋಷಕಾಂಶಗಳು 4 ಮೊಟ್ಟೆಯಲ್ಲಿರುವ ಪ್ರೋಟೀನ್‌ಗೆ ಸರಿಸಮನಾಗಿರುತ್ತವೆ.

100 ಗ್ರಾಂ ಹುರುಳಿಯಲ್ಲಿರುವ ಪೋಷಕಾಂಶಗಳು

21 ಗ್ರಾಂ ಪ್ರೋಟೀನ್

48 ಗ್ರಾಂ ಕಾರ್ಬೋಹೈಡ್ರೇಟ್‌ಗಳು

0.6 ಗ್ರಾಂ ಕೊಬ್ಬು

7.9 ಗ್ರಾಂ ಫೈಬರ್

330 ಕ್ಯಾಲೋರಿ

ಮಹಿಳೆಯರಿಗೆ ಪ್ರಯೋಜನಕಾರಿ

ಹುರುಳಿ ಕಾಳು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ. ಇವುಗಳಲ್ಲಿ ಕಬ್ಬಿಣಾಂಶವು ಹೇರಳವಾಗಿ ಕಂಡುಬರುತ್ತದೆ, ಈ ಕಾರಣದಿಂದಾಗಿ ಮಹಿಳೆಯರಲ್ಲಿ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಮಗುವಿಗೆ ಎದೆಹಾಲುಣಿಸುವ ಮಹಿಳೆಯರು ಹುರುಳಿ ಕಾಳನ್ನು ಸೇವನೆ ಮಾಡಬೇಕು. ಇದು ಹಾಲನ್ನು ಹೆಚ್ಚಿಸುತ್ತದೆ. ಮಹಿಳೆಯರು ಪ್ರತಿದಿನ ಒಂದು ಚಮಚ ಹುರಳಿ ಕಾಳಿನ ಪುಡಿಯನ್ನು ಸೇವನೆ ಮಾಡುವುದು ಉತ್ತಮ.

ಕೊಲೆಸ್ಟ್ರಾಲ್ ನಿಯಂತ್ರಣ

ಹುರುಳಿ ಕಾಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದನ್ನು ಆಹಾರದಲ್ಲಿ ಸೇರಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ನಿಯಂತ್ರಣದಲ್ಲಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...