alex Certify ಆಪಲ್‌ ವಾಚ್‌ನಿಂದಾಗಿ ಬಚಾವಾಯ್ತು ಗರ್ಭಿಣಿ ಮತ್ತು ಹೊಟ್ಟೆಯಲ್ಲಿದ್ದ ಮಗುವಿನ ಪ್ರಾಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪಲ್‌ ವಾಚ್‌ನಿಂದಾಗಿ ಬಚಾವಾಯ್ತು ಗರ್ಭಿಣಿ ಮತ್ತು ಹೊಟ್ಟೆಯಲ್ಲಿದ್ದ ಮಗುವಿನ ಪ್ರಾಣ….!

ಆಪಲ್ ವಾಚ್ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗಿದೆ. ಅದರ ಪ್ರೀಮಿಯಂ ಕ್ವಾಲಿಟಿ, ವಿನ್ಯಾಸ ಮತ್ತು ಫೀಚರ್‌ಗಳು ಜನರನ್ನು ಆಕರ್ಷಿಸಿವೆ. ಆಪಲ್‌ ವಾಚ್‌ಗಳಲ್ಲಿರುವ ಆರೋಗ್ಯಕ್ಕೆ ಸಂಬಂಧಪಟ್ಟ ಫೀಚರ್‌ಗಳನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ.

ಅನೇಕ ಸಂದರ್ಭಗಳಲ್ಲಿ ಆಪಲ್‌ ವಾಚ್‌ನಿಂದಾಗಿಯೇ ಜನರ ಪ್ರಾಣ ಉಳಿದ ಉದಾಹರಣೆಗಳೂ ಇವೆ. ಈ ಫೀಚರ್‌ಗಳು ಆಸ್ಪತ್ರೆಗಳಲ್ಲಿ ಲಭ್ಯವಿರುವ ಆರೋಗ್ಯ ಉಪಕರಣಗಳಷ್ಟೇ ನಿಖರವಾಗಿರುತ್ತವೆ. ಇವುಗಳಿಂದ ದೇಹದಲ್ಲಿನ ಅನೇಕ ಬದಲಾವಣೆಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು ಮತ್ತು ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಬಹುದು.

ಆಪಲ್ ವಾಚ್‌ನಿಂದಾಗಿ ಗರ್ಭಿಣಿಯೊಬ್ಬಳು ಬಚಾವ್‌ ಆಗಿರೋ ಘಟನೆ ಇದೀಗ ಬೆಳಕಿಗೆ ಬಂದಿದೆ. ಜೆಸ್ಸಿ ಕೆಲ್ಲಿ ಎಂಬ ಮಹಿಳೆ ಗರ್ಭಿಣಿಯಾಗಿದ್ದಾಳೆ. ಇದ್ದಕ್ಕಿದ್ದಂತೆ ಆಕೆಯ ಹೃದಯ ಬಡಿತದಲ್ಲಿ ಏರುಪೇರಾಗಿತ್ತು. ಆಕೆ ಧರಿಸಿದ್ದ ಆಪಲ್ ವಾಚ್‌ನಿಂದ ಈ ಬಗ್ಗೆ ಎಚ್ಚರಿಕೆಯ ಸಂದೇಶಗಳು ಬರಲಾರಂಭಿಸಿದ್ದವು. ಆರಂಭದಲ್ಲಿ ಜೆಸ್ಸಿ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದಳು. ಆದರೆ ಆಪಲ್ ವಾಚ್‌ನಿಂದ ಈ ರೀತಿಯ ಎಚ್ಚರಿಕೆ ಪದೇ ಪದೇ ಬರುತ್ತಿದ್ದಂತೆ ಆಕೆ ಆಸ್ಪತ್ರೆಗೆ ತೆರಳಿದ್ದಾಳೆ. ಆಪಲ್‌ ವಾಚ್‌ ಎಚ್ಚರಿಸಿದಂತೆ ಗರ್ಭಿಣಿಯ ಹೃದಯಬಡಿತದಲ್ಲಿ ತೀವ್ರ ಏರುಪೇರಾಗಿತ್ತು.

ಅವಳ ಹೃದಯವು ಪ್ರತಿ ನಿಮಿಷಕ್ಕೆ 120ಕ್ಕೂ ಹೆಚ್ಚು ಬಾರಿ ಬಡಿದುಕೊಳ್ಳುತ್ತಿತ್ತು. ಏನೋ ಸಮಸ್ಯೆಯಾಗಿರುವುದು ಆಗ ಕಂಡುಬಂದಿದೆ. ಮಹಿಳೆಗೆ ಹೆರಿಗೆ ನೋವು ಮತ್ತು ಗರ್ಭಾವಸ್ಥೆಯಲ್ಲಿ ತೊಡಕುಗಳು ಬರುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ರಕ್ತದೊತ್ತಡವೂ ಕುಸಿದಿದ್ದರಿಂದ ದೇಹದಲ್ಲಿ ರಕ್ತದ ಕೊರತೆ ಉಂಟಾಗಿತ್ತು. ಕೂಡಲೇ ವೈದ್ಯರು ಗರ್ಭಿಣಿಗೆ ಚಿಕಿತ್ಸೆ ನೀಡಿದ್ದು, ಹೆರಿಗೆ ಕೂಡ ಮಾಡಿಸಿದ್ದಾರೆ. ಆರೋಗ್ಯವಂತ ಮಗುವಿಗೆ ಮೇರಿ ಜನ್ಮ ನೀಡಿದ್ದಾಳೆ. ಸರಿಯಾದ ಸಮಯಕ್ಕೆ ಅಲರ್ಟ್ ಕಳುಹಿಸುವ ಮೂಲಕ ಈ ಮಹಿಳೆಗೆ ಆಪಲ್ ವಾಚ್ ನೀಡಿದ ಮಾಹಿತಿಯಿಂದಾಗಿ ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...