ಮಗುವಿಗೆ ತಾಯಿಯ ಎದೆ ಹಾಲು ತುಂಬಾ ಮುಖ್ಯ. ಇದು ಮಗುವಿನ ಬೆಳವಣಿಗೆಗೆ ಮತ್ತು ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ. ಸಾಮಾನ್ಯವಾಗಿ ಮಗುವಿಗೆ ಒಂದು ವರ್ಷದವರೆಗೂ ಎದೆಹಾಲು ನೀಡಬೇಕು ಎಂದು ಹೇಳುತ್ತಾರೆ. ಆದರೆ ಅದಕ್ಕಿಂತ ಹೆಚ್ಚು ಕಾಲ ನೀಡಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
*ಎದೆ ಹಾಲಿನಲ್ಲಿ ಕ್ಯಾಲ್ಸಿಯಂ, ಕೊಬ್ಬು, ಪ್ರೋಟಿನ್, ವಿಟಮಿನ್ ಎ ಮತ್ತು ಇತರ ಪೌಷ್ಟಿಕಾಂಶವಿರುತ್ತದೆ. ಇದು ಮಗುವಿನ ಬೆಳವಣೆಗೆಗೆ ಸಹಾಯ ಮಾಡುತ್ತದೆ.
*ಎದೆಹಾಲು ಮಗುವಿಗೆ ರೋಗಗಳ ವಿರುದ್ಧ ಹೋರಾಡುವಂತಹ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಉಸಿರಾಟದ ಸಮಸ್ಯೆ, ಕಿವಿ ಸೋಂಕು ಕಡಿಮೆಯಾಗುತ್ತದೆ.
*ಮಗುವಿನ ಮೆದುಳು 3 ವರ್ಷದವರೆಗೆ ಬೆಳವಣಿಗೆ ಹೊಂದುವುದರಿಂದ ಎದೆಹಾಲು ನೀಡಿವುದರಿಂದ ಮಗುವಿನ ಮೆದುಳಿನ ಬೆಳವಣೆಗೆಯನ್ನು ಉತ್ತೇಜಿಸುತ್ತದೆ.
*ಸ್ತನ್ಯಪಾನ ಮಗುವಿಗೆ ಮಾತ್ರವಲ್ಲದೇ ತಾಯಿಗೂ ಕೂಡ ಪ್ರಯೋಜನವಾಗಿದೆ. ಸ್ತನ್ಯಪಾನ ಮಾಡಿಸುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ನಂತಹ ಅಪಾಯ ಕಡಿಮೆಯಾಗುತ್ತದೆ.
*ಸ್ತನ್ಯಪಾನ ಮಾಡಿಸುವ ತಾಯಂದಿರ ತೂಕ ನಿಯಂತ್ರಣದಲ್ಲಿರುತ್ತದೆ. ಹಾಗೂ ಹೆಚ್ಚು ಹಸಿವಾಗುವುದರಿಂದ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಲು ಸಹಕಾರಿಯಾಗಿದೆ.