alex Certify BIG NEWS: ರಾಮನ ಹೆಸರು ಬರೆದರೆ ಮುಳುಗುವ ಕಲ್ಲು ತೇಲುತ್ತಿತ್ತು; ಮೋದಿ ಹೆಸರು ಹೇಳಿ ಮುಳುಗುತ್ತಿರುವ ಕಾಂಗ್ರೆಸ್ ನವರು ತೇಲಲಿ ಎಂದ ಸಿ.ಟಿ.ರವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಮನ ಹೆಸರು ಬರೆದರೆ ಮುಳುಗುವ ಕಲ್ಲು ತೇಲುತ್ತಿತ್ತು; ಮೋದಿ ಹೆಸರು ಹೇಳಿ ಮುಳುಗುತ್ತಿರುವ ಕಾಂಗ್ರೆಸ್ ನವರು ತೇಲಲಿ ಎಂದ ಸಿ.ಟಿ.ರವಿ

ವಿಜಯಪುರ: ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಾಂಗ್ರೆಸ್ ಪಕ್ಷಕ್ಕೆ ಇಟಲಿ ರಾಣಿಯೇ ಬಂಡವಾಳವಾದರೆ ಬಿಜೆಪಿಗೆ ಮಣ್ಣಿನ ಮಗ, ಬಡ ಕುಟುಂಬದಿಂದ ಬಂದ ವ್ಯಕ್ತಿ, ಸದಾ ಬಡಜನರು, ದೇಶಕ್ಕಾಗಿ ಶ್ರಮಿಸುವ, 20 ವರ್ಷಗಳಿಂದ ಒಂದೇ ಒಂದು ಹಗರಣವಿಲ್ಲದ ಪ್ರಧಾನಿ ಮೋದಿಯವರೇ ಬಂಡವಾಳ ಎಂದು ಟಾಂಗ್ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಹಗರಣಗಳಿಲ್ಲದೇ ಅಧಿಕಾರವನ್ನು ನಡೆಸಿಕೊಂಡು ಬಂದಿರುವ ಪ್ರಧಾನಿ ಮೋದಿಯವರ ಅಭಿವೃದ್ಧಿ ಕೆಲಸವನ್ನು ಕಾಂಗ್ರೆಸ್ ನವರು ಬೇಕಿದ್ದರೆ ಬಂಡವಾಳ ಮಾಡಿಕೊಂಡು ಪ್ರಧಾನಿ ಮೋದಿಯವರನ್ನು ಕೊಂಡಾಡಲಿ. ಪ್ರಧಾನಿ ಮೋದಿಯವರ ಯೋಜನೆಗಳನ್ನು ಶ್ಲಾಘಿಸಿ. ಆಗಲಾದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಳ್ಳುವ ಅವಮಾನದಿಂದ ಬಚಾವಾಗಬಹುದು ಎಂದು ಹೇಳಿದ್ದಾರೆ.

ರಾಮನ ಹೆಸರು ಬರೆದು ಹಾಕಿದರೆ ಮುಳುಗುವ ಕಲ್ಲು ತೇಲುತ್ತಿತ್ತಂತೆ. ಹಾಗೇ ಮೋದಿ ಹೆಸರನ್ನು ಹೇಳಿ ಮುಳುಗುತ್ತಿರುವ ಕಾಂಗ್ರೆಸ್ ನವರು ತೇಲಲಿ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...