HomeIndiaWatch | ರೈಲು ನಿಲ್ದಾಣದ ಛಾವಣಿ ಮೇಲೆ ನಾಯಿಯ ತಿರುಗಾಟ

Watch | ರೈಲು ನಿಲ್ದಾಣದ ಛಾವಣಿ ಮೇಲೆ ನಾಯಿಯ ತಿರುಗಾಟ

ಮುಂಬೈ: ಲೋಕಲ್ ರೈಲುಗಳಿಗೆ ಹೆಸರುವಾಸಿಯಾಗಿರುವ ಮುಂಬೈ ನಗರದ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಛಾವಣಿಯ ಮೇಲೆ ನಾಯಿಯೊಂದು ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ.

ಬೀದಿ ನಾಯಿಯೊಂದು ಮೇಲ್ಛಾವಣಿಯ ಮೇಲೆ ಅಪಾಯಕಾರಿಯಾಗಿ ತಿರುಗುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಮುಂಬೈನ ಅಂಧೇರಿ ರೈಲ್ವೆ ನಿಲ್ದಾಣದಿಂದ ವರದಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಟ್ವೀಟ್ ಪ್ರಕಾರ, ಅಂಧೇರಿಯ ಪ್ಲಾಟ್‌ಫಾರ್ಮ್ 4 ಮತ್ತು 5 ರ ಛಾವಣಿಯ ಮೇಲೆ ನಾಯಿ ತಿರುಗಾಡುತ್ತಿರುವುದನ್ನು ನೋಡಬಹುದು. ವಿಚಿತ್ರ ರೀತಿಯಲ್ಲಿ ನಾಯಿ ತಿರುಗಾಡುತ್ತಿರುವುದನ್ನು ಅನಿಲ್ ಜೋಶಿ ಎನ್ನುವವರು ವಿಡಿಯೋ ಮಾಡಿ ಪಶ್ಚಿಮ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ- ಮುಂಬೈ ವಿಭಾಗ ಮತ್ತು ಉತ್ತರ ರೈಲ್ವೆಯ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.

ನಾಯಿ ಅಲ್ಲಿಗೆ ಹೇಗೆ ಬಂತು ಎಂಬ ಬಗ್ಗೆ ಇದುವರೆಗೆ ಮಾಹಿತಿ ಸಿಗಲಿಲ್ಲ. ಪ್ರಕರಣವನ್ನು ಗಮನಿಸಿ, ಉತ್ತರ ರೈಲ್ವೇ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular