ಪ್ರೇಮವಿವಾಹಕ್ಕೆ ವಿರೋಧ ವ್ಯಕ್ತವಾದ ನಂತರ ಆತ್ಮಹತ್ಯೆ ಮಾಡಿಕೊಂಡ ಜೋಡಿಗಳಿಗೆ ಅವರ ಕುಟುಂಬ ವಿಶೇಷ ಉಡುಗೊರೆ ನೀಡಿದೆ. ಮೃತ ಜೋಡಿಯ ಪ್ರೀತಿಯನ್ನು ಮನಗಂಡ ಕುಟುಂಬಸ್ಥರು ಅವರಿಗೆ ಗೌರವಾರ್ಪಣೆಯಾಗಿ ಮೃತರ ಪ್ರತಿರೂಪಗಳನ್ನು ಸೃಷ್ಟಿಸಿ ಅದಕ್ಕೆ ವಸ್ತ್ರಗಳನ್ನು ಉಡಿಸಿ ಮದುವೆ ಮಾಡಲಾಗಿದೆ. ಇಂತಹ ಘಟನೆಗೆ ಗುಜರಾತ್ ಸಾಕ್ಷಿಯಾಗಿದೆ.
2022 ರಲ್ಲಿ, ಗಣೇಶ್ ಮತ್ತು ರಂಜನಾ ಅವರ ಪ್ರೇಮ ವಿವಾಹಕ್ಕೆ ಕುಟುಂಬ ವಿರೋಧಿಸಿತ್ತು. ಇದರಿಂದ ನೊಂದ ಪ್ರೇಮ ಪಕ್ಷಿಗಳು ಒಟ್ಟಿಗೆ ಮರದಲ್ಲಿ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ರು.
ಇದಕ್ಕೆ ಪಶ್ಚಾತಾಪವಾಗಿ ಮೃತರ ಕುಟುಂಬಗಳು ಪ್ರೇಮಿಗಳಿಗೆ ಮರಣೋತ್ತರ ವಿವಾಹವನ್ನು ಮಾಡಲು ನಿರ್ಧರಿಸಿದವು. ಜನವರಿ 14ರಂದು ಜೋಡಿಯ ಪ್ರತಿರೂಪಕ್ಕೆ ಸಾಂಪ್ರದಾಯಿಕ ಶೈಲಿಯಲ್ಲಿ ವಿವಾಹ ನೆರವೇರಿಸಿದ್ದಾರೆ.