ಸ್ಮಾರ್ಟ್ ಪೋನ್ ಬಳಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳದ್ದೇ ಈಗ ಸಿಂಹಪಾಲು. ಕುಂತಲ್ಲಿ, ನಿಂತಲ್ಲಿ, ಮಲಗುವಾಗಲೂ ಕೂಡ ಸ್ಮಾರ್ಟ್ ಫೋನ್ ಪಕ್ಕದಲ್ಲೇ ಇರಬೇಕು. ಹೀಗೆ ಸಿಕ್ಕಾಪಟ್ಟೆ ಸ್ಮಾರ್ಟ್ ಫೋನ್ ಬಳಸುವವರಿಗೊಂದು ಆತಂಕದ ಸುದ್ದಿ ಇಲ್ಲಿದೆ ನೋಡಿ.
ಅತಿ ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಸುವುದರಿಂದ ಮೆದುಳು ರಕ್ತ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಡಿಎನ್ಎ ಕೂಡ ಡ್ಯಾಮೇಜ್ ಆಗುತ್ತದೆ ಎಂದು ಹೇಳಲಾಗಿದೆ. ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆಲ್ಲಾ ಮೆದುಳು ಡಿಪ್ರೆಷನ್ ಗೆ ಒಳಗಾಗುತ್ತದೆ. ಅಲ್ಲದೇ, ಪುರುಷರಲ್ಲಿ ಸಂತಾನೋತ್ಪತ್ತಿ ಪ್ರಮಾಣ ಕುಂಠಿತವಾಗುತ್ತದೆ. ಸ್ಮಾರ್ಟ್ ಫೋನ್ ಗಳ ಬಳಕೆ ಕುರಿತಂತೆ ವಿಜ್ಞಾನಿಯೊಬ್ಬರು ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ತಿಳಿದುಬಂದಿದೆ.
ಸ್ಮಾರ್ಟ್ ಫೋನ್ ಗಳು ಎಲೆಕ್ಟ್ರೋಮ್ಯಾಗ್ನೆಟಿಕ್ ವೇವ್ ಮೂಲಕ ಕೆಲಸ ಮಾಡುತ್ತವೆ. ದೀರ್ಘ ಕಾಲದಿಂದ ಸ್ಮಾರ್ಟ್ ಫೋನ್ ಬಳಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಕಣ್ಣಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ, ರೇಡಿಯೇಷನ್ ನಿಂದಲೂ ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.