ಸಿನಿಮಾ ಚಿತ್ರೀಕರಣಕ್ಕಾಗಿ ಲಡಾಖ್ ಗೆ ತೆರಳಿದ್ದ ಸ್ಯಾಂಡಲ್ವುಡ್ ಚಿತ್ರರಂಗದ ಯುವ ನಟ ಧನುಷ್ ಹವಾಮಾನ ವೈಪರೀತ್ಯದಿಂದ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಕಳೆದ ವಾರ ಧನುಷ್ ಲಡಾಖ್ ಗೆ ತೆರಳಿದ್ದಾಗ ಉಸಿರಾಟದ ಸಮಸ್ಯೆಯನ್ನು ಎದುರಿಸಿದ್ದರು. ಕೂಡಲೇ ಅವರನ್ನು ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಧನುಷ್ ನಾಯಕ ನಟನಾಗುವ ಹಂಬಲ ಹೊತ್ತು ಬೆಂಗಳೂರಿಗೆ ಬಂದಿದ್ದು, ‘ಸ್ನೇಹಿತ’, ‘ಸಂಪಿಗೆಹಳ್ಳಿ’, ‘ಕೊಟ್ಳೊಲ್ಲಪ್ಪೋ ಕೈ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.