alex Certify ಪ್ರಧಾನಿ ಮೋದಿ ಕುರಿತ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಸಾಕ್ಷ್ಯ ಚಿತ್ರದ ವಿರುದ್ಧ ಕಿಡಿ ಕಾರಿದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಕುರಿತ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಸಾಕ್ಷ್ಯ ಚಿತ್ರದ ವಿರುದ್ಧ ಕಿಡಿ ಕಾರಿದ ಕೇಂದ್ರ ಸರ್ಕಾರ

BBC Documentary On PM Modi 'Propaganda Piece', Reflects 'Colonial Mindset':  MEAಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿನ ಆಡಳಿತದ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಬಿಸಿ ಎರಡು ಕಂತುಗಳ ಸರಣಿಯನ್ನು ತಯಾರಿಸಿದ್ದು, ಇದರ ಮೊದಲ ಭಾಗ ಈಗಾಗಲೇ ಪ್ರಸಾರವಾಗಿದೆ. ಇದರ ಬೆನ್ನಲ್ಲೇ ಸಾಕ್ಷ್ಯ ಚಿತ್ರಕ್ಕೆ ಕೇಂದ್ರ ಸರ್ಕಾರ ಕಿಡಿ ಕಾರಿದ್ದು, ಇದು ಸುಳ್ಳಿನ ಕಂತೆ ಎಂದು ಆರೋಪಿಸಿದೆ.

ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ವಿ ಈ ಕುರಿತಂತೆ ಮಾತನಾಡಿದ್ದು, ವಸಾಹತುಶಾಯಿ ಮನಸ್ಥಿತಿಯೊಂದಿಗೆ ಈ ಸಾಕ್ಷ್ಯ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಇದು ನಿರ್ದಿಷ್ಟ ಗುರಿಯೊಂದಿಗೆ ಅಪಪ್ರಚಾರ ಮಾಡಲು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಕೂಡ ಈ ಕುರಿತಂತೆ ಪ್ರತಿಕ್ರಿಯಿಸಿದ್ದು, ಬಿಬಿಸಿ ಮಾಡಿರುವ ವರದಿಗೆ ನಮ್ಮ ಸಹಮತವಿಲ್ಲ. ಜೊತೆಗೆ ಇದು ಸರ್ಕಾರದ ನಿಲುವು ಕೂಡಾ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾರದೇ ಮೇಲೆ ಶೋಷಣೆಯಾದರೆ ಬ್ರಿಟನ್ ಸಹಿಸುವುದಿಲ್ಲ. ಆದರೆ ಓರ್ವ ಗೌರವಾನ್ವಿತ ವ್ಯಕ್ತಿಯ ಬಗ್ಗೆ ಸಲ್ಲದ ಆರೋಪ ಮಾಡುವ ಮೂಲಕ ಚಾರಿತ್ರ್ಯ ಹರಣ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

— Gayatri 🇬🇧🇮🇳(BharatKiBeti) (@changu311) January 18, 2023

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...