
ಜೀರಿಗೆ ಭಾರತದ ಪ್ರತಿ ಅಡುಗೆ ಮನೆಯಲ್ಲೂ ಸಿಗುವಂತಹ ಮಸಾಲೆ ಪದಾರ್ಥ. ಇದನ್ನು ನಾವು ಪ್ರತಿನಿತ್ಯ ಅಡುಗೆಯಲ್ಲಿ ಬಳಸುತ್ತೇವೆ. ಆಹಾರದ ರುಚಿ ಮತ್ತು ಉತ್ತಮ ಘಮಕ್ಕಾಗಿ ಜೀರಿಗೆ ಬೇಕೇ ಬೇಕು. ಜೀರಿಗೆ ಸರಳವಾದ ತರಕಾರಿಯ ರುಚಿಯನ್ನು ಸಹ ಬದಲಾಯಿಸುತ್ತದೆ. ರುಚಿಯ ಹೊರತಾಗಿ, ಜೀರಿಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.
ಜೀರಿಗೆಯನ್ನು ಸೇವಿಸುವುದರಿಂದ ಜೀರ್ಣಶಕ್ತಿಯು ಬಲವಾಗಿರುತ್ತದೆ. ಆದರೆ ಜೀರಿಗೆಯನ್ನು ಅತಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಜೀರಿಗೆಯನ್ನು ಅತಿಯಾಗಿ ಸೇವಿಸುವುದರಿಂದಾಗುವ ಅಡ್ಡ ಪರಿಣಾಮಗಳೇನು ಅನ್ನೋದನ್ನು ನೋಡೋಣ.
ಎದೆಯುರಿ: ಜೀರಿಗೆಯನ್ನು ಅತಿಯಾಗಿ ಸೇವಿಸುವುದರಿಂದ ಎದೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಜೀರ್ಣಕಾರಿ ಸಮಸ್ಯೆಗಳು ಜೀರಿಗೆ ಸೇವನೆಯಿಂದ ದೂರವಾಗುತ್ತವೆ. ಆದರೆ ಮಿತಿಮೀರಿ ಸೇವನೆ ಮಾಡಿದ್ರೆ ಸಮಸ್ಯೆ ತಪ್ಪಿದ್ದಲ್ಲ. ಹಾಗಾಗಿ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ಯಕೃತ್ತಿಗೆ ಹಾನಿ: ಜೀರಿಗೆಯನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡಕ್ಕೆ ಹಾನಿಯಾಗುತ್ತದೆ. ಜೀರಿಗೆಯನ್ನು ಕಡಿಮೆ ಸೇವಿಸಬೇಕು, ಇಲ್ಲವಾದರೆ ನಮ್ಮ ದೇಹಕ್ಕೆ ಫಿಲ್ಟರ್ ಆಗಿ ಕಾರ್ಯನಿರ್ವಹಿಸುವ ಕಿಡ್ನಿ, ಅದರ ಕಾರ್ಯಚಟುವಟಿಕೆಗೆ ತೊಂದರೆಯಾಗುತ್ತದೆ.
ತೇಗು ಬರುವುದು: ಜೀರಿಗೆಯನ್ನು ಜಾಸ್ತಿ ತಿನ್ನುವುದರಿಂದ ಪದೇ ಪದೇ ತೇಗು ಬರಬಹುದು. ನಿಮ್ಮ ಕರುಳು ಮತ್ತು ಹೊಟ್ಟೆಯಲ್ಲಿ ಸಂಗ್ರಹವಾದ ಗ್ಯಾಸ್ ಹೊರಬರುತ್ತದೆ.
ಸಕ್ಕರೆ ಮಟ್ಟ ಇಳಿಕೆ : ಅತಿಯಾದ ಜೀರಿಗೆ ಸೇವನೆಯಿಂದ ದೇಹದಲ್ಲಿನ ಸಕ್ಕರೆ ಅಂಶವು ಕಡಿಮೆಯಾಗುತ್ತದೆ. ದೇಹದಲ್ಲಿ ದೌರ್ಬಲ್ಯ ಮತ್ತು ತಲೆತಿರುಗುವಿಕೆಯ ಸಮಸ್ಯೆಗಳಾಗಬಹುದು.