ಮನೆಯಲ್ಲೇ ಕುಳಿತು ಕೆಲಸ ಮಾಡಬಯಸುವವರು ಡೇಟಾ ಎಂಟ್ರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿ ತಿಂಗಳು ಉತ್ತಮ ಸಂಬಳವನ್ನು ಇದ್ರಲ್ಲಿ ಪಡೆಯಬಹುದಾಗಿದೆ. ಡೇಟಾವನ್ನು ಕಂಪ್ಯೂಟರ್ ನಲ್ಲಿ ಎಂಟ್ರಿ ಮಾಡುವುದು ಡೇಟಾ ಎಂಟ್ರಿ ಆಪರೇಟರ್ಸ್ ಕೆಲಸವಾಗಿರುತ್ತದೆ. ಯಾವುದೇ ಭಾಷೆಯಲ್ಲಿ ಹಿಡಿತ ಹಾಗೂ ವೇಗದ ಟೈಪಿಂಗ್ ಬಂದಲ್ಲಿ ನೀವು ಆರಾಮವಾಗಿ ಈ ಕೆಲಸ ಶುರು ಮಾಡಬಹುದು.
ಡೇಟಾ ಎಂಟ್ರಿ ಆಪರೇಟರ್ಸ್ ಗಳಿಗೆ ಯಾವುದೇ ವಿಶೇಷ ಅರ್ಹತೆ ಬೇಕಾಗಿಲ್ಲ. ಪಿಯುಸಿ ಮುಗಿಸಿದ್ದರೆ ಸುಲಭವಾಗಿ ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಡೇಟಾ ಎಂಟ್ರಿ ಆಪರೇಟರ್ಸ್ ಗಳಾಗಿ ಕೆಲಸ ಮಾಡಬಹುದಾಗಿದೆ. ಇದಕ್ಕೆ ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಟೈಪಿಂಗ್ ಸ್ಪೀಡ್ ಚೆನ್ನಾಗಿರಬೇಕು. ಪ್ರತಿ ನಿಮಿಷಕ್ಕೆ 35 ಪದಗಳನ್ನು ನೀವು ಟೈಂ ಮಾಡುತ್ತೀರೆಂದ್ರೆ ನಿಮಗೆ ಯಾವುದೇ ದೊಡ್ಡ ಕಂಪನಿ ಕೂಡ ಕೆಲಸ ನೀಡುತ್ತದೆ. ಕಂಪ್ಯೂಟರ್ ನಲ್ಲಿಯೇ ಎಲ್ಲ ಕೆಲಸ ಮಾಡುವ ಕಾರಣ ಕಂಪ್ಯೂಟರ್ ಬಗ್ಗೆ ತಿಳಿದಿರಬೇಕಾಗುತ್ತದೆ.
ಇದಕ್ಕೆಂದು ವಿಶೇಷ ಕೋರ್ಸ್ ಮುಗಿಸುವ ಅಗತ್ಯವಿಲ್ಲ. ಡೇಟಾ ಎಂಟ್ರಿ ಕ್ಷೇತ್ರವನ್ನೇ ಮುಖ್ಯ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬಯಸುವವರು ಡೇಟಾ ಎಂಟ್ರಿ ಕೋರ್ಸ್ ಮಾಡಲು ಅವಕಾಶವಿದೆ. ಕೋರ್ಸ್ ಮುಗಿಸಿದ್ರೆ ಹೆಚ್ಚೆಚ್ಚು ಆಫರ್ ಗಳು ಬರ್ತವೆ.
ಪ್ರತಿ ತಿಂಗಳು ನಿಗದಿತ ಸಂಬಳ ಸಿಗುವುದಿಲ್ಲ. ನೀವು ಮಾಡಿದ ಕೆಲಸ ಹಾಗೂ ಅನುಭವದ ಮೇಲೆ ಸಂಬಳ ನೀಡಲಾಗುತ್ತದೆ. ಅನುಭವವುಳ್ಳವರು ತಿಂಗಳಿಗೆ 10 ರಿಂದ 20 ಸಾವಿರ ರೂಪಾಯಿಯನ್ನು ಗಳಿಸ್ತಾರೆ.