ಪ್ರತಿ ದಿನ ದೇವರ ಆರಾಧನೆ ಮಾಡುತ್ತೇವೆ. ನೆಚ್ಚಿನ ದೇವರ ಪೂಜೆ ವೇಳೆ ಕೆಲವೊಂದು ವಸ್ತುಗಳನ್ನು ಬಳಸ್ತೇವೆ. ಆದ್ರೆ ರಾಶಿಗನುಗುಣವಾಗಿ ಯಾವ ದೇವರನ್ನು ಯಾವ ವಸ್ತು ಬಳಸಿ ಪೂಜೆ ಮಾಡಬೇಕೆಂಬುದು ಎಲ್ಲರಿಗೂ ತಿಳಿದಿರಬೇಕು. ರಾಶಿಗನುಗುಣವಾಗಿ ಪೂಜೆ ಮಾಡಿದ್ರೆ ಯಶಸ್ಸು ಬೇಗ ಸಿಗುತ್ತೆ ಎನ್ನಲಾಗುತ್ತದೆ.
ಮೇಷ : ಈ ರಾಶಿಯವರ ದೊಡ್ಡ ಸಮಸ್ಯೆ ಚಂಚಲತೆ. ಹನುಮಂತನ ಆರಾಧನೆ ಮಾಡುವುದು ಉತ್ತಮ. ಪೂಜೆ ವೇಳೆ ಕೆಂಪು ಹೂವನ್ನು ಬಳಸಬೇಕು.
ವೃಷಭ : ಈ ರಾಶಿಯವರ ದೊಡ್ಡ ಸಮಸ್ಯೆ ಹಠಮಾರಿತನ. ಶಿವನ ಆರಾಧನೆ ಮಾಡಬೇಕು. ಬಿಳಿ ಚಂದನ ಬಳಸಿ ಪೂಜೆ ಮಾಡಬೇಕು.
ಮಿಥುನ : ಸಂದಿಗ್ಧತೆ ಇವ್ರ ದೊಡ್ಡ ಸಮಸ್ಯೆ. ಶ್ರೀಕೃಷ್ಣನ ಪೂಜೆ ಬೆಸ್ಟ್. ಗುಗ್ಗುಲ ಧೂಪದಿಂದ ಪೂಜೆ ಮಾಡಬೇಕು.
ಕರ್ಕ : ಭಾವನಾತ್ಮಕತೆ ನಿಮ್ಮ ದೊಡ್ಡ ಸಮಸ್ಯೆ. ಶಿವನ ಆರಾಧನೆ ಮಾಡಬೇಕು. ಪೂಜೆ ವೇಳೆ ಶಂಖವನ್ನು ಅವಶ್ಯವಾಗಿ ಬಳಸಬೇಕು.
ಸಿಂಹ : ಜೀವನದ ಹೋರಾಟ ನಿಮ್ಮ ದೊಡ್ಡ ಸಮಸ್ಯೆ. ಸೂರ್ಯ ದೇವನ ಆರಾಧನೆ ಮಾಡಬೇಕು. ಕುಂಕುಮವನ್ನು ಪೂಜೆಗೆ ಬಳಸಬೇಕು.
ಕನ್ಯಾ : ಧನದ ಹಿಂದೆ ಓಡುವುದು ನಿಮ್ಮ ದೊಡ್ಡ ಸಮಸ್ಯೆ. ದೇವಿ ಮಾತೆಯ ಪೂಜೆ ಮಾಡಬೇಕು. ಶುದ್ಧ ತುಪ್ಪದ ದೀಪವನ್ನು ಬೆಳಗಬೇಕು.
ತುಲಾ : ಅಜಾಗರೂಕತೆ ನಿಮ್ಮ ದೊಡ್ಡ ಸಮಸ್ಯೆ. ಭಗವಂತ ಕೃಷ್ಣನ ಪೂಜೆ ಮಾಡಬೇಕು. ಬಿಳಿ ಬಣ್ಣದ ಹೂ ಬಳಸಬೇಕು.
ವೃಶ್ಚಿಕ : ನಿಧಾನಗತಿ ಜೀವನ ಇವ್ರ ಸಮಸ್ಯೆ. ಹನುಮಂತನ ಆರಾಧನೆ ಮಾಡಬೇಕು. ಪೂಜೆ ವೇಳೆ ತುಳಸಿ ದಳವನ್ನು ಬಳಸಬೇಕು.
ಧನು : ನಿಮ್ಮ ಧ್ವನಿ ನಿಮ್ಮ ದೊಡ್ಡ ಸಮಸ್ಯೆ. ಸೂರ್ಯನ ಆರಾಧನೆ ಮಾಡಬೇಕು. ಬಿಳಿ ಮಿಠಾಯಿಯನ್ನು ಪೂಜೆಗೆ ಬಳಸಿ.
ಮಕರ : ಆರೋಗ್ಯದ ಬಗ್ಗೆ ಉದಾಸೀನತೆ ದೊಡ್ಡ ಸಮಸ್ಯೆ. ಶಿವನ ಪೂಜೆ ಮಾಡಬೇಕು. ಹಳದಿ ಬಣ್ಣದ ಹೂವನ್ನು ಬಳಸಬೇಕು.
ಕುಂಭ : ಬೇರೆಯವರ ಜವಾಬ್ದಾರಿ ಮೈಮೇಲೆಳೆದುಕೊಳ್ಳುವುದು ದೊಡ್ಡ ಸಮಸ್ಯೆ. ಶ್ರೀ ಕೃಷ್ಣನ ಪೂಜೆ ಮಾಡಬೇಕು. ಚಂದನದ ಸುವಾಸನೆಯುಳ್ಳ ಧೂಪವನ್ನು ಬಳಸಬೇಕು.
ಮೀನ : ಜವಾಬ್ದಾರಿ ಬಗ್ಗೆ ಅಜಾಗರೂಕತೆ..ಗಣೇಶನ ಪೂಜೆ ಮಾಡಬೇಕು. ಪೂಜೆ ವೇಳೆ ಲಾಡನ್ನು ಬಳಸಬೇಕು.