ಕಡಬ: ಶಿಕ್ಷಣ ಹುದ್ದೆಗೆ ಕಾಯ್ತಾ ಇರೋವ್ರಿಗೆ ಇದೀಗ ಸರ್ಕಾರ ಸಿಹಿ ಸುದ್ದಿ ನೀಡ್ತಾ ಇದೆ. ಇಷ್ಟು ದಿನ ಹುದ್ದೆ ಬೇಕು ಎಂದು ಕಾದಿರೋವ್ರಿಗೆ ನೇಮಕಾತಿ ಕುರಿತಂತೆ ಗುಡ್ ನ್ಯೂಸ್ ನೀಡಿದೆ. ಮುಂದಿನ 15 ದಿನಗಳ ಒಳಗಾಗಿ ಶಿಕ್ಷಕರ ನೇಮಕಾತಿ ಮಾಡೋದಾಗಿ ಹೇಳಿದ್ದಾರೆ. ಶಿಕ್ಷಣಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ಕ್ರಮ ವಹಿಸುತ್ತಿದೆ. ಈ ಬೆನ್ನಲ್ಲೇ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.
ಹೌದು, ಕಡಬ, ಸುಳ್ಯ ಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಿಕ್ಷಣ ಸಚಿವ ನಾಗೇಶ್, ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ವೇಗ ನೀಡಲು ನಿರ್ಧಾರ ಮಾಡಲಾಗಿದೆ. ಒಟ್ಟು 15000 ಜಿಪಿಟಿ ಶಿಕ್ಷಕರು, 2500 ಹೈಸ್ಕೂಲು ಶಿಕ್ಷಕರ, 1000 ಪಿಯು ಶಿಕ್ಷಕರ ನೇಮಕಕ್ಕೆ ವ್ಯವಸ್ಥೆ ಮಾಡಲಾಗಿದ್ದು, 34000 ಅತಿಥಿ ಶಿಕ್ಷಕರನ್ನು ಶಾಲಾ ಪ್ರಾರಂಭದಲ್ಲೇ ತಗೊಂಡು ಸಂಬಳ ಕೂಡಾ ಜಾಸ್ತಿ ಮಾಡಿದ್ದೇವೆ. 15000 ಶಿಕ್ಷಕರ ಸಿಇಟಿ ಆಗಿದ್ದು ಇನ್ನು 15 ದಿನದೊಳಗೆ ಅಂತಿಮ ಹಂತದ ನೇಮಕಾತಿ ಪ್ರಕ್ರಿಯೆ ಆಗಲಿದೆ ಎಂದರು.
ಇನ್ನು ನೇಮಕಾತಿ ವಿಚಾರದಲ್ಲಿ ಕಾನೂನು ಕಾರಣಕ್ಕಾಗಿ ಸ್ವಲ್ಪ ತಡವಾಗಿದೆ ಎಲ್ಲವನ್ನು ನಿವಾರಿಸಿಕೊಂಡು ನೇಮಕಾತಿ ಮಾಡಲಾಗುತ್ತದೆ ಎಂದರು. ಇನ್ನು ಈ ವರ್ಷದಲ್ಲಿ ಹೊಸ ಶಿಕ್ಷಣ ನೀತಿಗೆ ಚಾಲನೆ ನೀಡಲಾಗುತ್ತಿದೆ. ಕೆಲವು ಆಯ್ದ ಶಾಲೆಗಳಲ್ಲಿ ಸದ್ಯಕ್ಕೆ ಚಾಲನೆ ನೀಡ್ತಾ ಇದ್ದು, ಮುಂದೆ ಎಲ್ಲಾ ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ವಿಸ್ತರಿಸಲಿದೆ ಎಂದು ಹೇಳಿದರು.