ಕೋವಿಡ್ ನಂತರ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗ್ತಿವೆ. ಅದ್ರಲ್ಲೂ ಜಿಮ್‌ನಲ್ಲಿ ತಾಲೀಮು ಮಾಡುವಾಗ ಯುವಕರು ಹಠಾತ್ತನೆ ಸಾಯುವ ಘಟನೆಗಳು ತ್ವರಿತ ದರದಲ್ಲಿ ಹೆಚ್ಚುತ್ತಿವೆ.
ನಟರಾದ ಸಿದ್ಧಾರ್ಥ್ ಶುಕ್ಲಾ, ಸಿದ್ದಾಂತ್ ಸೂರ್ಯವಂಶಿ, ರಾಜು ಶ್ರೀವಾಸ್ತವ ಮುಂತಾದ ಅನೇಕ ನಟರು ವರ್ಕೌಟ್ ಮಾಡುವಾಗ ಹೃದಯಾಘಾತಕ್ಕೆ ಬಲಿಯಾದರು.
ಇಂತಹುದೇ ಘಟನೆಯೊಂದು ಚಂಡೀಗಢದಲ್ಲಿ ನಡೆದಿದ್ದು ತಾಲೀಮು ಮುಗಿಸಿದ ಬಾಡಿ ಬಿಲ್ಡರ್ ಒಬ್ಬರು ಕೈ ಚಾಚುತ್ತಲೇ ಸಾವನ್ನಪ್ಪಿದ್ದಾರೆ. ಮೃತರನ್ನು ರಾಮ್ ರಾಣಾ ಎಂದು ಗುರುತಿಸಲಾಗಿದೆ. ಅವರಿಗೆ 33 ವರ್ಷ ವಯಸ್ಸು.
ರಾಣಾ ವ್ಯಾಯಾಮದ ನಂತರ ಜಿಮ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ. ಅವರು ವರ್ಕೌಟ್ ಮುಗಿಸಿ ತಮ್ಮ ತೋಳುಗಳನ್ನು ಚಾಚಿ ಹಿಂದಕ್ಕೆ ವಾಲಿದರು. ಇದ್ದಕ್ಕಿದ್ದಂತೆ ಅವರು ನೆಲಕ್ಕೆ ಬಿದ್ದಿದ್ದಾರೆ. ಅವರ ಸ್ನೇಹಿತರು ಚಂಡೀಗಢದ ಸೆಕ್ಟರ್ -16 ನಲ್ಲಿರುವ ಜಿಎಂಎಸ್ಹೆಚ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.