ಉತ್ತರ ದೆಹಲಿಯಲ್ಲಿ ನಡೆದ ಹತ್ಯೆಯ ಆಘಾತಕಾರಿ ಪ್ರಕರಣದಲ್ಲಿ ಕಳ್ಳತನದ ಆರೋಪದ ಮೇಲೆ 26 ವರ್ಷದ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿದೆ. ಮೊಬೈಲ್ ಫೋನ್ ಕದ್ದಿದ್ದಾನೆ ಎಂದು ಆರೋಪಿಸಿ ಆತನ ಮೇಲೆ ಗುಂಪೊಂದು ದಾಳಿ ಮಾಡಿ ಕೊಂದಿದೆ ಎಂದು ವರದಿಯಾಗಿದೆ.
ಬುಧ್ ನಗರ ಪ್ರದೇಶದಲ್ಲಿ ಮೊಬೈಲ್ ಫೋನ್ ಕದ್ದ ಆರೋಪದ ಮೇಲೆ ಬೀದಿಗಳಲ್ಲಿ ಆತನನ್ನು ಅಟ್ಟಾಡಿಸಿ ನಿರ್ದಯವಾಗಿ ಥಳಿಸಿಲಾಗಿದೆ. ನಂತರ ಆತನ ಮೃತದೇಹ ಪತ್ತೆಯಾಗಿದೆ. ಕೊಲೆಯಾದ ವ್ಯಕ್ತಿಯನ್ನು 26 ವರ್ಷದ ದೀಪು ಎಂದು ಗುರುತಿಸಲಾಗಿದ್ದು, ಆತನ ಬೆನ್ನು, ಕೈ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಉತ್ತರ ದೆಹಲಿಯ ಬುದ್ ನಗರ ಪ್ರದೇಶದಲ್ಲಿ ಜನವರಿ 12 ರಂದು ಪೊಲೀಸರು ಆತನ ಶವವನ್ನು ಪತ್ತೆ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಪೊಲೀಸರ ಪ್ರಕಾರ, ದೀಪು ಮೊಬೈಲ್ ಫೋನ್ ಕದಿಯುವ ಉದ್ದೇಶದಿಂದ ಗೋದಾಮಿನೊಳಗೆ ಪ್ರವೇಶಿಸಿದ್ದನು. ಗೋದಾಮಿನೊಳಗೆ ನುಸುಳಲು ಯತ್ನಿಸಿದ ದೀಪು, ಸ್ಥಳದಲ್ಲಿ ಮಲಗಿದ್ದ ಮೂವರು ವ್ಯಕ್ತಿಗಳಿಗೆ ಸಿಕ್ಕಿಬಿದ್ದಾಗ ಆತನನ್ನು ಬಂಧಿಸಿ ಥಳಿಸಲಾಗಿದೆ.
ಗೋದಾಮಿನೊಳಗಿದ್ದ ಮೂವರು ವ್ಯಕ್ತಿಗಳು ದೀಪುವನ್ನು ಹಿಡಿದ ನಂತರ ದೊಣ್ಣೆ ಮತ್ತು ಲಾಠಿಗಳಿಂದ ಥಳಿಸಲು ಪ್ರಾರಂಭಿಸಿದರು. ಗೋದಾಮಿನ ಮಾಲೀಕನೂ ಗುಂಪು ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪುಗೆ ಥಳಿಸಿದ ನಂತರ ಶವವನ್ನು ಬೀದಿಯಲ್ಲಿ ಎಸೆಯಲಾಯಿತು. ಎರಡು ದಿನಗಳ ನಂತರ ಶವ ಪತ್ತೆಯಾಗಿದೆ. ಇದೀಗ ದೀಪು ಅವರನ್ನು ಗುಂಪು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.