ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್‌ನ ಐತಿಹಾಸಿಕ ಗೆಲುವನ್ನು ಆಚರಿಸಲು ನಟ ಪ್ರಕಾಶ್ ರಾಜ್ ಬ್ರಿಟಿಷ್-ಅಮೆರಿಕನ್ ಹಾಸ್ಯ ಜೋಡಿ ಲಾರೆಲ್ ಮತ್ತು ಹಾರ್ಡಿ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಚಿತ್ರದ ಈ ಹಾಡು ‘ನಾಟು ನಾಟು’ ಅತ್ಯುತ್ತಮ ಮೂಲ ಗೀತೆ ಎಂದು ಹೆಸರಿಸಲ್ಪಟ್ಟಿದೆ.
ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಲಾದ ಕಪ್ಪು-ಬಿಳುಪು ಕ್ಲಿಪ್‌ನಲ್ಲಿ, ಹಿನ್ನೆಲೆಯಲ್ಲಿ ನಾಟು ನಾಟು ಹಾಡುತ್ತಿದ್ದಂತೆ ಹಾಸ್ಯನಟರು ಒಟ್ಟಿಗೆ ಕಾಲು ಅಲ್ಲಾಡಿಸುತ್ತಿರುವುದನ್ನು ನೋಡಬಹುದು. ಇದು 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.
ಗೋಲ್ಡನ್ ಗ್ಲೋಬ್ಸ್‌ನಲ್ಲಿ ಆರ್‌ಆರ್‌ಆರ್ ನ ಗೆಲುವಿನ ಬಗ್ಗೆ ಇತರರು ಸಂತೋಷಪಟ್ಟರೆ ಅನೇಕರು ವಿಡಿಯೋ ನೋಡಿ ಖುಷಿ ಪಟ್ಟುಕೊಂಡಿದ್ದಾರೆ. ಅಂದಹಾಗೆ ಈ “ನಾಟು ನಾಟು” ಹಾಡು ಸುಮಾರು ನಾಲ್ಕೂವರೆ ನಿಮಿಷದ್ದಾಗಿದೆ.
ಇದು ಟೇಲರ್ ಸ್ವಿಫ್ಟ್ ಅವರ “ಕ್ಯಾರೊಲಿನಾ”, ಲೇಡಿ ಗಾಗಾ ಮತ್ತು ಬ್ಲಡ್ಪಾಪ್ ಅವರ “ಟಾಪ್ ಗನ್: ಮೇವರಿಕ್” ಚಿತ್ರದ “ಹೋಲ್ಡ್ ಮೈ ಹ್ಯಾಂಡ್” ಮತ್ತು ರಿಹಾನ್ನಾ ಅವರ “ಬ್ಲ್ಯಾಕ್ ಪ್ಯಾಂಥರ್: ವಾಕಂಡಾ ಫಾರೆವರ್” ನಿಂದ “ಲಿಫ್ಟ್ ಮಿ ಅಪ್” ಅನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.