ಪೋಷಕರ ಆಧಾರ್, ಗುರುತಿನ ಚೀಟಿ ತರುವಂತೆ ಶಾಲಾ ಮಕ್ಕಳಿಗೆ ನಿರ್ದೇಶನ; ತಣ್ಣಗಾಗದ ವಿವಾದ

ಕೇರಳದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪೋಷಕರ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ಗಳನ್ನು ತರುವಂತೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಕಳೆದ ವಾರದ ಆರಂಭದಲ್ಲಿ, ಕೊಲ್ಲಂನ ವಡಕ್ಕೆವಿಲಾದಲ್ಲಿರುವ ಶ್ರೀ ನಾರಾಯಣ ಪಬ್ಲಿಕ್ ಸ್ಕೂಲ್ (ಎಸ್‌ಎನ್‌ಪಿ) ವಿದ್ಯಾರ್ಥಿಗಳು ತಮ್ಮ ಪೋಷಕರ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ಗಳನ್ನು ಮತದಾರರ ಪಟ್ಟಿಗೆ ಲಿಂಕ್ ಮಾಡಲು ತರಲು ಸೂಚಿಸಿದ್ದರು. ಇದರ ಬೆನ್ನಲ್ಲೇ ಈ ಸುತ್ತೋಲೆ ದೇವರನಾಡಲ್ಲಿ ಮತ್ತೆ ವಿವಾದವೆಬ್ಬಿಸಿದೆ.

ನಂತರ ಮುಖ್ಯ ಚುನಾವಣಾಧಿಕಾರಿ ಮಧ್ಯಪ್ರವೇಶಿಸಿ ನಿರ್ದೇಶನವನ್ನು ಹಿಂಪಡೆಯುವಂತೆ ಶಾಲೆಗೆ ಸೂಚಿಸಿದ್ದಾರೆ. ಇಂತಹ ಆದೇಶ ಹೊರಡಿಸುವಂತಿಲ್ಲ, ಚುನಾವಣಾ ವ್ಯವಸ್ಥೆಗೆ ಆಧಾರ್ ಲಿಂಕ್ ಮಾಡುವುದು ಸ್ವಯಂಪ್ರೇರಿತ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಚುನಾವಣಾ ಆಯೋಗದಿಂದ ಸ್ಪಷ್ಟ ನಿರ್ದೇಶನವಿದೆ. ಬಿಎಲ್‌ಒಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಭರವಸೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read