ಹಾಡಹಗಲೇ ಲಕ್ಷಾಂತರ ನಗದು ಲೂಟಿ; ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

On CCTV, Man With Guns In Both Hands Loots Rs 10 Lakh From ATM Cash Vanಐಸಿಐಸಿಐ ಬ್ಯಾಂಕ್ ಎಟಿಎಂನ ಹೊರಗೆ ಮುಸುಕುಧಾರಿ ವ್ಯಕ್ತಿಯೊಬ್ಬ ಬಂದೂಕು ತೋರಿಸಿ ಕ್ಯಾಶ್ ವ್ಯಾನ್‌ನಿಂದ ₹ 10 ಲಕ್ಷ ದೋಚಿದ್ದಾರೆ. ಉತ್ತರ ದೆಹಲಿಯ ವಜೀರಾಬಾದ್ ಫ್ಲೈಓವರ್‌ನಲ್ಲಿರುವ ಐಸಿಐಸಿಐ ಬ್ಯಾಂಕ್ ಎಟಿಎಂ ಹೊರಗೆ ಘಟನೆ ನಡೆದಿದೆ. ದರೋಡೆಕೋರ ಹಣ ದೋಚುತ್ತಿರುವ ದೃಶ್ಯ ಎಂಟಿಎಂನೊಳಗಿನ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ದರೋಡೆಕೋರ ವ್ಯಕ್ತಿ ಎಟಿಎಂನ ಭದ್ರತಾ ಸಿಬ್ಬಂದಿ ಉದಯಪಾಲ್ ಸಿಂಗ್ (55) ಅವರ ಮೇಲೂ ಗುಂಡು ಹಾರಿಸಿದ್ದು, ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇಬ್ಬರು ಅಧಿಕಾರಿಗಳು ಹಣವನ್ನು ಎಟಿಎಂಗೆ ಜಮಾ ಮಾಡಲು ವ್ಯಾನ್‌ನಿಂದ ನಗದಿನ ಬ್ಯಾಗ್ ಹೊತ್ತೊಯ್ಯುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ನಿಂತಿದ್ದ ವ್ಯಾನ್‌ ಬಳಿ ನಿಧಾನವಾಗಿ ಹೋಗುತ್ತಾನೆ. ಕೆಲವು ನಿಮಿಷದ ನಂತರ ಮುಸುಕುಧಾರಿ ಸೆಕ್ಯುರಿಟಿ ಗಾರ್ಡ್‌ಗೆ ಗುಂಡು ಹಾರಿಸುತ್ತಿದ್ದಂತೆ ಚಾಲಕ ಹೊರಗೆ ಹಾರಿ ಓಡಿಹೋದಾಗ ವ್ಯಾನ್‌ನ ಬಾಗಿಲು ತೆರೆದಿದೆ.

ಎರಡೂ ಕೈಗಳಲ್ಲಿ ಬಂದೂಕುಗಳೊಂದಿಗೆ ಶಸ್ತ್ರಸಜ್ಜಿತವಾದ ವ್ಯಕ್ತಿ ನಂತರ ಎಟಿಎಂ ರೂಂನೊಳಗಿದ್ದ ಇಬ್ಬರು ಅಧಿಕಾರಿಗಳ ಕಡೆಗೆ ತಿರುಗುತ್ತಿದ್ದಂತೆ, ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸಿಬ್ಬಂದಿಗಳ ಪೈಕಿ ಒಬ್ಬ ವ್ಯಕ್ತಿ ಎಟಿಎಂನಿಂದ ಬ್ಯಾಗ್ ಎಳೆದು ಪರಾರಿಯಾಗುತ್ತಾನೆ. ದರೋಡೆಕೋರನು ಚೀಲವನ್ನು ಎತ್ತಿಕೊಂಡು ತನ್ನ ಕೈಯಲ್ಲಿ ಬಂದೂಕನ್ನು ಹಿಡಿದುಕೊಂಡು ಎಸ್ಕೇಪ್ ಆಗುತ್ತಾನೆ. ಆರೋಪಿ ₹ 10.78 ಲಕ್ಷ ನಗದು ಕದ್ದೊಯ್ದಿದ್ದು, ಆತನನ್ನು ಹಿಡಿಯಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read