ನಿರಾಶ್ರಿತ ಮಹಿಳೆಯ ಮೇಲೆ ಪುರುಷನೊಬ್ಬ ನೀರು ಎರಚಿ, ಆಕೆಯನ್ನು ಪಕ್ಕಕ್ಕೆ ಸರಿಯುವಂತೆ ಹೇಳುವ ಅಮಾನವೀಯ ವಿಡಿಯೋ ವೈರಲ್ ಆಗಿದೆ. ಕಾಲಿಯರ್ ಗ್ವಿನ್ ಎಂದು ಗುರುತಿಸಲಾದ ವ್ಯಕ್ತಿ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ತನ್ನ ಕಲಾ ಗ್ಯಾಲರಿಯ ಮುಂದೆ ಕುಳಿತಿದ್ದ ಮಹಿಳೆಯನ್ನು ದೂರ ಸರಿಸಲು ನೀರನ್ನು ಸಿಂಪಡಿಸುವ ವಿಡಿಯೋ ಇದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಳಕೆದಾರರು ಅವರ ವರ್ತನೆಯನ್ನು ಖಂಡಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಪುರುಷನು ಮಹಿಳೆಯ ಮೇಲೆ ಹೇಗೆ ನೀರು ಸಿಂಪಡಿಸುತ್ತಾನೆ ಎಂಬುದನ್ನು ತೋರಿಸುತ್ತದೆ. ವೃದ್ಧೆ ನೀರು ಸಿಂಪಡಿಸಬೇಡ ಎಂದು ಹೇಳಿದರೂ ಕೇಳದೇ ನೀರು ಸಿಂಪಡಿಸುತ್ತಾನೆ. ನಾನು ಇಲ್ಲಿಂದ ಹೋಗುತ್ತೇನೆ, ಹೀಗೆ ಮಾಡಬೇಡ ಎಂದು ಕೇಳಿಕೊಂಡರೂ ಈ ಕಟುಕ ನೀರು ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ವ್ಯಕ್ತಿಯ ಕ್ರಮವನ್ನು ಖಂಡಿಸಿ ನೂರಾರು ಪ್ರತಿಕ್ರಿಯೆಗಳು ಬಂದಿವೆ. ವಿಡಿಯೋ 18 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ಮನುಷ್ಯರು ಹೇಗೆ ಮೃಗೀಯವಾಗಿ ವರ್ತಿಸುತ್ತಿದ್ದಾರೆ ಎಂದು ಪ್ರತಿಕ್ರಿಯೆಗಳು ಬರುತ್ತಿವೆ.
https://twitter.com/ClownWorld_/status/1612658471673155584?ref_src=twsrc%5Etfw%7Ctwcamp%5Etweetembed%7Ctwterm%5E1612658471673155584%7Ctwgr%5E7745e0bd8a4e27c419c0b65d4afe3620c579cf1b%7Ctwcon%5Es1_&ref_url=https%3A%2F%2Fwww.news18.com%2Fbuzz%2Finhumane-video-of-us-man-spraying-water-on-homeless-woman-leaves-twitter-fuming-6818185.html
https://twitter.com/ClownWorld_/status/1612658471673155584?ref_src=twsrc%5Etfw%7Ctwcamp%5Etweetembed%7Ctwterm%5E1612676551237328898%7Ctwgr%5E7745e0bd8a4e27c419c0b65d4afe3620c579cf1b%7Ctwcon%5Es2_&ref_url=https%3A%2F%2Fwww.news18.com%2Fbuzz%2Finhumane-video-of-us-man-spraying-water-on-homeless-woman-leaves-twitter-fuming-6818185.html