ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಲೆ ಇದೆ. ಜನ ಸಂಜೆಯಾದರೆ ಸಾಕು ಮನೆಯಿಂದ ಹೊರಗೆ ಬರೋದಿಕ್ಕೂ ಯೋಚನೆ ಮಾಡುವಂತಾಗಿದೆ. ಬೆಳಗ್ಗೆಯಂತೂ ಹಾಸಿಗೆಯಿಂದ ಎದ್ದೇಳೋಕೆ ಆಗದೇ ಇರೋ ಅಷ್ಟು ಚಳಿ ಇದ್ದು, ಜನ ತತ್ತರಿಸಿ ಹೋಗ್ತಾ ಇದ್ದಾರೆ. ಇನ್ನು ಮಾರ್ನಿಂಗ್ ವಾಕ್ ಮಾಡೋವ್ರಂತೂ ಏನಪ್ಪಾ ಇದು ಚಳಿಗಾಲ ಅಂತಿದ್ದಾರೆ.
ಇನ್ನು ಬೀದರ್ ಭಾಗದಲ್ಲಿ ಕನಿಷ್ಟ ತಾಪಮಾನ ದಾಖಲಾಗುತ್ತಿದೆ. ಗುರುವಾರ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆಯಂತೆ. ಇನ್ನೂ ತಾಪಮಾನ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕನಿಷ್ಠ ತಾಪಮಾನದಿಂದಾಗಿ ವಯೋವೃದ್ಧರು, ಮಕ್ಕಳಿಗೆ ಹೆಚ್ಚು ತೊಂದರೆ ಆಗ್ತಾ ಇದೆ. ಇದರಿಂದಾಗಿ ಬೆಚ್ಚಗಿನ ಬಟ್ಟೆಗಳ ಮೊರೆ ಹೋಗುತ್ತಿದ್ದಾರೆ ಜನ.
ಇತ್ತ ಬೆಂಗಳೂರು ಸೇರಿದಂತೆ ರಾಜ್ಯದ ಸಾಕಷ್ಟು ಭಾಗಗಳಲ್ಲಿ ಚಳಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿಯೂ ಚಳಿ ಹೆಚ್ಚಾಗಲಿದೆ. ಇದರಿಂದ ಮಾರ್ಕೆಟ್ ನಲ್ಲಿ ಕೆಲಸ ಮಾಡುವವರಿಗೆ, ಹಾಲು ವ್ಯಾಪಾರಸ್ಥರು, ಪತ್ರಿಕೆ ಹೀಗೆ ಬೆಳಗಿನ ಜಾವದ ಕೆಲಸಗಾರರಿಗೆ ತೊಂದರೆ ಆಗ್ತಾ ಇದೆ. ಈ ವರ್ಷವಂತೂ ಚಳಿ ಹೆಚ್ಚು ಆಗ್ತಾ ಇದೆ.