ಬೀದಿನಾಯಿಗಳನ್ನು ನಿಷೇಧಿಸುವ ಕುರಿತು ಘಾಜಿಯಾಬಾದ್‌ನ ರಾಜ್ ನಗರದಲ್ಲಿ ಮಹಿಳೆಯರು ಭಾರಿ ಪ್ರಮಾಣದಲ್ಲಿ ಕಿತ್ತಾಟ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಬೀದಿನಾಯಿಗಳನ್ನು ನಿಷೇಧಿಸುವ ಕುರಿತು ಮಹಿಳೆಯರು ಜಗಳವಾಡುತ್ತಾ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ಜಗಳ ವಿಕೋಪಕ್ಕೆ ಹೋದಾಗ ಪರಸ್ಪರ ಕೂದಲನ್ನು ಎಳೆಯುವುದನ್ನು ಕಾಣಬಹುದು, ಒಬ್ಬರನ್ನೊಬ್ಬರು ಹೊಡೆಯುವುದನ್ನು ಮತ್ತು ಇನ್ನೂ ಜೋರಾಗಿ ಹೊಡೆಯಿರಿ ಎನ್ನುವುದು ವಿಡಿಯೋದಲ್ಲಿ ಕೇಳಿಸುತ್ತಿದೆ.
ಪೊಲೀಸರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಿವರ್ ಹೈಟ್ಸ್ ಸೊಸೈಟಿಯ ಸಮಿತಿಯು ಬೀದಿ ನಾಯಿಗಳನ್ನು ಪ್ರದೇಶದಿಂದ ಹೊರಕ್ಕೆ ಹಾಕಲು ನಿರ್ಧರಿಸಿದ್ದಾರೆ. ಆದರೆ ಇಲ್ಲಿರುವ ಶ್ವಾನ ಪ್ರೇಮಿಗಳು ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿನಾಯಿ ನಿಷೇಧದ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ಈ ಘರ್ಷಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೊಸೈಟಿ ಆವರಣದಲ್ಲಿರುವ ನಾಯಿಗಳನ್ನು ಸೆಣಬಿನ ಚೀಲಗಳಲ್ಲಿ ಹಾಕಲಾಗುತ್ತಿತ್ತು. ಪೂನಂ ಕಶ್ಯಪ್ ಎಂಬ ಪ್ರಾಣಿಪ್ರಿಯರು ಇದನ್ನು ವಿರೋಧಿಸಿ ದನಿ ಎತ್ತಿದಾಗ ಇಷ್ಟೆಲ್ಲಾ ರಾದ್ಧಾಂತವಾಗಿದೆ.