ಮಾಂಸಾಹಾರ ತ್ಯಜಿಸಿದ್ದಾರೆ ಈ ಸೆಲೆಬ್ರಿಟಿಗಳು……! ಸಸ್ಯಾಹಾರದಿಂದ್ಲೇ ಆಗಿದ್ದಾರೆ ಸೂಪರ್‌ ಫಿಟ್‌…..!!

ಸಿನಿ ಜಗತ್ತಿನಲ್ಲಿ ಜನಪ್ರಿಯತೆ ಗಳಿಸಬೇಕೆಂದರೆ ಸೌಂದರ್ಯ, ಪ್ರತಿಭೆ ಜೊತೆಗೆ ಫಿಟ್ನೆಸ್‌ ಕೂಡ ಇರಬೇಕು. ಹಾಗಾಗಿಯೇ ಬಾಲಿವುಡ್‌ನ ಖ್ಯಾತ ನಟಿಯರು ಕೂಡ ದೀರ್ಘಕಾಲದವರೆಗೆ ತಮ್ಮನ್ನು ತಾವು ಫಿಟ್ ಆಗಿರಿಸಿಕೊಳ್ಳುತ್ತಾರೆ. ಬಿಟೌನ್‌ನ ಕೆಲವು ನಟಿಯರು ಫಿಟ್ ಆಗಿರಲು ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಿದ್ದಾರೆ. ಮಾಂಸಾಹಾರವನ್ನ ತ್ಯಜಿಸಿ ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾಗಿದ್ದಾರೆ.

ಶಿಲ್ಪಾ ಶೆಟ್ಟಿ: ಬಾಲಿವುಡ್‌ನಲ್ಲಿ ಫಿಟ್ನೆಸ್‌ ಮೂಲಕವೂ ಹೆಸರು ಮಾಡಿದ ನಟಿ ಶಿಲ್ಪಾ ಶೆಟ್ಟಿ. ಯೋಗಾಸನವನ್ನು ಶಿಲ್ಪಾ ಅಳವಡಿಸಿಕೊಂಡಿದ್ದಾರೆ. ನಟನೆಯಲ್ಲೂ ಶಿಲ್ಪಾ ಶೆಟ್ಟಿಯದ್ದು ಎತ್ತಿದ ಕೈ. ಸಾಕಷ್ಟು ಸಿನೆಮಾಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಈಕೆ ಸಾಬೀತುಪಡಿಸಿದ್ದಾರೆ. ಬಾಲಿವುಡ್‌ನ ಅತ್ಯಂತ ಫಿಟ್ ನಟಿಯರಲ್ಲಿ ಶಿಲ್ಪಾ ಕೂಡ ಒಬ್ಬರು. ವಿಶೇಷ ಅಂದ್ರೆ ಶಿಲ್ಪಾ ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾಗಿದ್ದಾರೆ.

ಭೂಮಿ ಪೆಡ್ನೇಕರ್: ಭೂಮಿ ನಟನೆಯ ಮೊದಲ ಚಿತ್ರ ‘ದಮ್ ಲಗಾ ಕೆ ಹೈಶಾ’ ಎಲ್ಲರಿಗೂ ಇಷ್ಟವಾಗಿತ್ತು. ಈ ಸಿನಿಮಾಕ್ಕಾಗಿ ಭೂಮಿ ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದರು. ಕೊರೊನಾ ಸಮಯದಲ್ಲಿ ಲಾಕ್‌ಡೌನ್‌ನಿಂದಾಗಿ ಭೂಮಿ ಪೆಡ್ನೇಕರ್‌ ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾಗಿದ್ದಾರಂತೆ. ವೆಜಿಟೇರಿಯನ್‌ ಆಗಿ ಬದಲಾಗಿರುವ ಭೂಮಿ ಸಿಕ್ಕಾಪಟ್ಟೆ ಫಿಟ್‌ & ಫೈನ್‌ ಆಗಿದ್ದಾರೆ.

ಜೆನಿಲಿಯಾ : ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರ ಪತ್ನಿ ಜೆನಿಲಿಯಾ ತಮ್ಮ ಕ್ಯೂಟ್‌ ಲುಕ್‌ನಿಂದ್ಲೇ ಸಿನಿಪ್ರಿಯರನ್ನು ಸೆಳೆದಿದ್ದರು. ಜೆನಿಲಿಯಾ ಕೂಡ ಸಸ್ಯಾಹಾರಿಯಂತೆ. ಮಾಂಸಾಹಾರವನ್ನು ತ್ಯಜಿಸಿರುವುದಾಗಿ ಖುದ್ದು ಜೆನಿಲಿಯಾ ಬಹಿರಂಗಪಡಿಸಿದ್ದಾರೆ.

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಫಿಟ್ನೆಸ್‌ ಬಗ್ಗೆ ಎರಡು ಮಾತೇ ಇಲ್ಲ. ಅನುಷ್ಕಾ ಮತ್ತು ವಿರಾಟ್ ಇಬ್ಬರೂ ಸಸ್ಯಾಹಾರವನ್ನೇ ಸೇವಿಸುತ್ತಾರೆ. ಖುದ್ದು ವಿರಾಟ್‌ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಶ್ರದ್ಧಾ ಕಪೂರ್‌: ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಸಹ ಹಲವು ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಶ್ರದ್ಧಾ ಕಪೂರ್ ಅವರ ಫಿಟ್ನೆಸ್‌ ರಹಸ್ಯವೆಂದರೆ ನಿಯಮಿತವಾದ ಆಹಾರ ಕ್ರಮ. ಶ್ರದ್ಧಾ ಕಪೂರ್ ಕೂಡ ನಾನ್ ವೆಜ್ ಡಯಟ್ ಬಿಟ್ಟು ಸಸ್ಯಾಹಾರವನ್ನು ಅಳವಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read