alex Certify ಕೆಂಪು ಅಕ್ಕಿಯಿಂದ ಸಿಗುವ ‘ಆರೋಗ್ಯ’ ಪ್ರಯೋಜನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಂಪು ಅಕ್ಕಿಯಿಂದ ಸಿಗುವ ‘ಆರೋಗ್ಯ’ ಪ್ರಯೋಜನಗಳು

The Only Red Rice Nutrition Facts You Need To Know - 24 Mantra Organicಹೆಚ್ಚಾಗಿ ಎಲ್ಲರ ಮನೆಯಲ್ಲೂ ಅಕ್ಕಿಯನ್ನು ಅನ್ನ ಮಾಡಲು ಮಾತ್ರ ಬಳಸುತ್ತಾರೆ. ಆದರೆ ಈ ಅಕ್ಕಿಯಿಂದಲೂ ಕೂಡ ಕೆಲವು ರೋಗಗಳನ್ನು ದೂರಮಾಡಬಹುದು. ಹೇಗೆ ಅಂತೀರಾ.

* ಫುಡ್ ಪಾಯಿಸನ್ ಸಮಸ್ಯೆ ಅಥವಾ ಅಜೀರ್ಣ ಸಮಸ್ಯೆಗಳಿಂದ ಭೇದಿ ಉಂಟಾಗಿ ಸುಸ್ತಾಗಿದ್ದಾಗ ಅಕ್ಕಿ ತರಿಗಂಜಿ ಮಾಡಿ ಉಪ್ಪು ಬೆರಸಿ ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ.

* ಮೊಸರು ಬೆರೆಸಿದ ಕೆಂಪಕ್ಕಿಯ ಅನ್ನವನ್ನು ನಿತ್ಯವೂ ಸೂರ್ಯೋದಯಕ್ಕೆ ಮೊದಲು ಸೇವಿಸಿದರೆ ಅರೆತಲೆ ನೋವು ಕಡಿಮೆಯಾಗುತ್ತದೆ.

* ಚಿಕ್ಕ ಮಕ್ಕಳಿಗೆ ಅಥವಾ ದೊಡ್ಡವರಿಗೆ ಬೇಸಿಗೆಯಲ್ಲಿ ಬೆವರು ಗುಳ್ಳೆಗಳು ಉಂಟಾಗುತ್ತವೆ. ಅಂತಹ ಸಮಯದಲ್ಲಿ ಅಕ್ಕಿ ತೊಳೆದ ನೀರಿನಲ್ಲಿ ಕೈ ಕಾಲುಗಳನ್ನು ತೊಳೆದರೆ ಬೆವರು ಗುಳ್ಳೆ ಸಮಸ್ಯೆ ಶಮನವಾಗುತ್ತದೆ.

* ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಇದ್ದವರು ಕೆಂಪು ಅಕ್ಕಿಯಲ್ಲಿ ಅನ್ನ ಮಾಡಿ ತಿನ್ನಬೇಕು.

* ಅಕ್ಕಿಯನ್ನು 2ನೇ ಬಾರಿ ತೊಳೆದ ನೀರಿಗೆ ನೆಲ್ಲಿಕಾಯಿ ರಸ ಎರಡು ಚಮಚ ಬೆರಸಿ ಕುಡಿದರೆ ಸ್ತ್ರೀಯರಲ್ಲಿ ಬಿಳುಪು ಹೋಗುವುದು ಅಥವಾ ಬಿಳಿ ಸೆರಗು ಕಡಿಮೆಯಾಗುತ್ತದೆ.

* ಅಕ್ಕಿಯ ಹೊಟ್ಟು ಪೌಷ್ಟಿಕಾಂಶಗಳಿಂದ ಕೂಡಿದೆ. ಅಕ್ಕಿಯ ಹೊಟ್ಟನ್ನು ಎಳ್ಳು, ನೆಲಗಡಲೆ, ಗೋಡಂಬಿಯನ್ನು ಬೆರೆಸಿ ಬೆಲ್ಲದ ಪಾಕಕ್ಕೆ ಸೇರಿಸಿ ಲಾಡುವಿನಂತೆ ಮಾಡಿ ಸೇವಿಸಿದರೆ ನರಗಳಿಗೆ ಶಕ್ತಿ ಬರುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...