ಫ್ಲಾಟ್ಹೆಡ್ಸ್ ಸಂಸ್ಥಾಪಕ ಗಣೇಶ್ ಬಾಲಕೃಷ್ಣನ್ ಅವರ ಸ್ಫೂರ್ತಿದಾಯಕ ಕಥೆ ಇತ್ತೀಚಿಗೆ ಬಹಳ ವೈರಲ್ ಆಗಿತ್ತು. ಪತ್ನಿಯನ್ನು ಹೇಗೆ ಅವರು ಹುರಿದುಂಬಿಸುತ್ತಿದ್ದಾರೆ ಎನ್ನುವ ಘಟನೆ ಇದು.
ಇದೀಗ, ಬಾಲಕೃಷ್ಣನ್ ಅವರ ಹೋರಾಟದಿಂದ ಸ್ಫೂರ್ತಿ ಪಡೆದ ರಿಚಾ ಸಿಂಗ್ ಎನ್ನುವವರು ಪತ್ನಿಗೆ ಬೆಂಬಲ ನೀಡುತ್ತಾ, ಉದ್ಯಮಕ್ಕಾಗಿ ತಮ್ಮ ಸಂಗಾತಿಯ ಮೇಲೆ ಅವಲಂಬಿತರಾಗಿ ಯಶಸ್ಸು ಗಳಿಸಿರುವ ಮತ್ತು ವಾಸ್ತವವನ್ನು ಒಪ್ಪಿಕೊಳ್ಳಲು ಹಿಂಜರಿಯದ ಮಹಾಪುರುಷರ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ.
ಬಾಲಕೃಷ್ಣನ್ ಅವರು ತಮ್ಮ ಪತ್ನಿಯಿಂದಾಗಿ ತಾವು ಇಂಥ ಹುದ್ದೆ ಏರಿರುವುದು ಎಂದು ಹೇಳಿಕೊಂಡಿದ್ದಾರೆ. ಅವರಂತೆಯೇ ವಾಸ್ತವವನ್ನು ಒಪ್ಪಿಕೊಳ್ಳಲು ಹಿಂಜರಿಯದ ಇತರ ಇಬ್ಬರು ಪ್ರಸಿದ್ಧ ಉದ್ಯಮಿಗಳ ಕಥೆಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.
ಇದಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಬಗ್ಗೆ ಹೇಳಿದ್ದಾರೆ. “ಅವರು ತಮ್ಮ ಮೊದಲ ಉದ್ಯಮದ ವೈಫಲ್ಯದ ನಂತರ ಅವರ ಪತ್ನಿ ಸುಧಾ ಮೂರ್ತಿ ಅವರು ನೀಡಿದ ಅಲ್ಪ ಬಂಡವಾಳದಿಂದ ಇನ್ಫೋಸಿಸ್ ಅನ್ನು ಪ್ರಾರಂಭಿಸಿದರು” ಎಂದು ನಾರಾಯಣ ಮೂರ್ತಿ ಹೇಳಿರುವುದನ್ನು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಅದರಂತೆಯೇ, ಭಾರತ್ಪೇ ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ತಮ್ಮ ಹೊಸ ಸ್ಟಾರ್ಟಪ್ನಲ್ಲಿ 5 ವರ್ಷಗಳನ್ನು ಪೂರೈಸುವ ಉದ್ಯೋಗಿಗಳಿಗೆ ಮರ್ಸಿಡಿಸ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು, ತಮ್ಮ ಪತ್ನಿಯಿಂದ ತಾವು ಈ ಮಟ್ಟಕ್ಕೆ ಏರಿರುವ ಬಗ್ಗೆ ಉಲ್ಲೇಖಿಸಿರುವುದಾಗಿ ಟ್ವಿಟರ್ನಲ್ಲಿ ಹೇಳಲಾಗಿದ್ದು, ಈ ಇಬ್ಬರು ಉದ್ಯಮಿಗಳಿಗೆ ನೆಟ್ಟಿಗರು ಹ್ಯಾಟ್ಸ್ಆಫ್ ಎನ್ನುತ್ತಿದ್ದಾರೆ.