ಅಪ್ಪ-ಅಮ್ಮನನ್ನ ಭೇಟಿಯಾಗಲು ಹೋದ ಅಪ್ರಾಪ್ತ ಜನವರಿ 2ರಿಂದ ನಾಪತ್ತೆಯಾಗಿದ್ದ. ಮಗ ಕಾಣ್ತಿಲ್ಲ ಅನ್ನುವ ನೋವಿನಿಂದ, ಆ ಯುವಕನ ಪಾಲಕರು ಪಂಡರಿನಾಥ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
17 ವರುಷದ ಆ ಅಪ್ರಾಪ್ತ ಉಜ್ಜೆನ್ನಲ್ಲಿದ್ದ ತನ್ನ ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದ. ಕೆಲ ದಿನಗಳ ಮಟ್ಟಿಗೆ ಆತ ತನ್ನ ತಂದೆ-ತಾಯಿಗೆ ಭೇಟಿಯಾಗಬೇಕು ಅನ್ನೊ ನೆಪಮಾಡಿ ನಗರಕ್ಕೆ ಹೋಗಿದ್ದ ಊರಿಗೆ ಅಂತ ಹೋಗಿದ್ದಾತ ಮತ್ತೆ ಮರಳಿ ಉಜ್ಜೇನ್ಗೆ ಬಂದೇ ಇರಲಿಲ್ಲ. ಇದರಿಂದ ಚಿಂತಾಕ್ರಾಂತರಾಗಿದ್ದ ಆತನ ಪಾಲಕರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಅಪ್ರಾಪ್ತ ಕಿಶೋರ್ಗೆ, ತನ್ನ ಚಿಕ್ಕಪ್ಪನ ಬಳಿ ಇಷ್ಟವಿರಲಿಲ್ಲ. ಆದ್ದರಿಂದ ಆತ ಮನೆಗೆ ಹೋಗುವ ಕಾರಣ ತೊಟ್ಟು ಹೋಗಿದ್ದ. ಆದರೆ ಆತ ಅತ್ತ ಮನೆಗೂ ಹೋಗದೇ, ಇತ್ತ ಉಜ್ಜೆನ್ ಗೂ ಮರಳದೇ ಕಾಣೆಯಾಗಿದ್ದ. ಆತನ ತಂದೆ ಕೊಟ್ಟ ದೂರಿನ ಆಧಾರದ ಮೇಲೆ ಅನೇಕ ಕಡೆಗಳಲ್ಲಿ ಆತನನ್ನ ಹುಡುಕಲಾಗಿದೆ. ಆದರೂ ಆತ ಸಿಕ್ಕಿರಲಿಲ್ಲ. ಈ ನಡುವೆ ಆತ ಎಂಆಯ್ಜಿ ಇಲಾಖೆ ಬಳಿ ಇರುವ ಸ್ಥಳದ ಸುಳಿವು ಸಿಕ್ಕಿದೆ. ಅಲ್ಲಿ ತಕ್ಷಣವೇ ಪೊಲೀಸ್ ತಂಡ ಹೋದಾಗ ಈ ಅಪ್ರಾಪ್ತ ಸಿಕ್ಕಿದ್ದ ಎಂದು ಪಂಡರಿನಾಥ್ ಪೊಲೀಸ್ ಠಾಣೆ ಅಧಿಕಾರಿ ಸತೀಶ್ ಪಟೇಲ್ ಅವರು ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ.
ಕಿಶೋರ್ ಸಿಕ್ಕ ತಕ್ಷಣ ಆತನ ಪಾಲಕರಿಗೆ ವಿಷಯ ತಲುಪಿಸಲಾಗಿದೆ. ಮಗ ಸುರಕ್ಷಿತವಾಗಿ ಮನೆಗೆ ಹಿಂದಿರುಗಿದ್ದಕ್ಕೆ ತಂದೆ-ತಾಯಿ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟೆ ಅಲ್ಲ ಮಗನನ್ನ ಹುಡುಕಿ ಕೊಡುವುದಕ್ಕೆ ಸಹಾಯ ಮಾಡಿದ ಪೊಲೀಸರಿಗೂ ಧನ್ಯವಾದ ಹೇಳಿದ್ದಾರೆ.