ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಪೊಲೀಸರು ಆರೋಪಿ ಸಮೀರ್ ನನ್ನು ಬಂಧಿಸಿದ್ದಾರೆ.
ನಿನ್ನೆ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಸಮೀರ್ ಮಚ್ಚು ಬೀಸಿದ್ದ. ಕೂದಲೆಳೆ ಅಂತರದಲ್ಲಿ ಸುನೀಲ್ ಪಾರಾಗಿದ್ದ. ಸಮೀರ್ ಬಂಧನಕ್ಕಾಗಿ ಸಾಗರ ಪೊಲೀಸರು ಮೂರು ವಿಶೇಷ ತಂಡ ರಚನೆ ಮಾಡಿದ್ದರು. ನಿನ್ನೆ ತಡ ರಾತ್ರಿ ಶಿವಮೊಗ್ಗದಲ್ಲಿ ಆರೋಪಿ ಸಮೀರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಗರದ ಬಿ ಹೆಚ್ ರಸ್ತೆಯ ಬಸ್ ನಿಲ್ದಾಣದ ಬಳಿ ಸುನೀಲ್ ಹತ್ಯೆಗೆ ಸಂಚು ರೂಪಿಸಿ, ಸಮೀರ್ ಮಚ್ಚು ಬೀಸಿದ್ದ. ಆದರೆ ದಾಳಿ ವೇಳೆ ಕ್ಷಣಾರ್ಧದಲ್ಲಿ ಸುನೀಲ್ ಪಾರಾಗಿದ್ದ. ಆರೋಪಿ ಬಂಧನಕ್ಕೆ ಆಗ್ರಹಿಸಿ ಬಜರಂಗದಳ ಕಾರ್ಯಕರ್ತರು ಇಂದು ಸಾಗರ ಬಂದ್ ಗೆ ಕರೆ ನೀಡಿದ್ದರು.