ಮೈ ಕೊರೆವ ಚಳಿಯಲ್ಲಿ ಮ್ಯಾಗಿ ತಿನ್ನಲು ಮುಂದಾದ ವ್ಯಕ್ತಿಯೇ ಮ್ಯಾಗಿಯಂತಾಗಿದ್ದಾರೆ.
ಜೇಕ್ ಫಿಶರ್ ಎಂಬ ವ್ಯಕ್ತಿ ಡಿಸೆಂಬರ್ 28 ರಂದು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಕೊರೆವ ಚಳಿಯಲ್ಲಿ ಮ್ಯಾಗಿ ತಿನ್ನಲು ಮುಂದಾದಾಗ ಮ್ಯಾಗಿ ಬಟ್ಟಲು ಸೇರಿದಂತೆ ಸ್ಪೂನ್ ಹೆಪ್ಪುಗಟ್ಟಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು ವಿಡಿಯೋ ವೈರಲ್ ಆಗಿದೆ.
ವೀಡಿಯೊದಲ್ಲಿ, ಆ ವ್ಯಕ್ತಿ ಹೆಪ್ಪುಗಟ್ಟಿದ ನೂಡಲ್ಸ್ ಬಟ್ಟಲಿನೊಂದಿಗೆ ನಿಂತಿರುವುದನ್ನು ಕಾಣಬಹುದು . ಮ್ಯಾಗಿ ತಿನ್ನಲು ಇಲ್ಲಿಗೆ ಬಂದಿದ್ದೇನೆ ಮತ್ತು ಅದು ತುಂಬಾ ತಂಪಾಗಿದೆ ಎಂದು ಹೇಳಿ ತಮ್ಮ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.