ಮುಂದಿನ ವರ್ಷದ ಜನವರಿ 1 ರೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಉದ್ಘಾಟನೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ ಬೆನ್ನ್ಲಲೇ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ರಾಜ್ಯಾಧ್ಯಕ್ಷರು “ದ್ವೇಷದ ಭೂಮಿಯಲ್ಲಿ ಮಂದಿರವನ್ನು ನಿರ್ಮಿಸುತ್ತಿದ್ದಾರೆ” ಎಂದು ಆರೋಪಿಸಿ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಕಿಡಿ ಹೊತ್ತಿಸಿದ್ದಾರೆ. ಆರ್‌ಜೆಡಿ ಬಿಹಾರ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಅವರು ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯನ್ನು ಗುರಿಯಾಗಿಸಿಕೊಂಡು ಅವರು “ಹೇ ರಾಮ್” ಅನ್ನು ನಂಬುತ್ತಾರೆಯೇ ಹೊರತು “ಜೈ ಶ್ರೀ ರಾಮ್” ಅಲ್ಲ ಎಂದು ಹೇಳಿದ್ದಾರೆ. ದ್ವೇಷದ ನೆಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮನನ್ನು ಭವ್ಯವಾದ ಅರಮನೆಯಲ್ಲಿ ಬಂಧಿಸಲು ಸಾಧ್ಯವಿಲ್ಲ. ನಾವು ‘ಹೇ ರಾಮ್’ ಅನ್ನು ನಂಬುವ ಜನರು , ‘ಜೈ ಶ್ರೀ ರಾಮ್’ ಅಲ್ಲ ಎಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಕುರಿತು ಕೇಂದ್ರ ಗೃಹ ಸಚಿವರ ಘೋಷಣೆಯ ಒಂದು ದಿನದ ನಂತರ ಹೇಳಿದ್ದಾರೆ.
ಅಮಿತ್ ಷಾ ಅವರನ್ನು ಗೇಲಿ ಮಾಡಿದ ಸಿಂಗ್, ಭಗವಾನ್ ರಾಮ ಇಂದು ಜನರ ಹೃದಯದಿಂದ ದೂರವಿರುವ ದೇವಾಲಯಗಳಲ್ಲಿ ಕುಳಿತಿದ್ದಾನೆ.” ರಾಮನು ಈಗ ದೇವಸ್ಥಾನಕ್ಕೆ ಸೇರುತ್ತಾನೆಯೇ? ರಾಮ ಈಗ ದೇಶಕ್ಕೆ ಸೇರುವುದಿಲ್ಲವೇ? ಭಾರತದಲ್ಲಿ ರಾಮನನ್ನು ಜನರ ಹೃದಯದಿಂದ ಕಿತ್ತುಕೊಂಡು ಕಲ್ಲುಗಳಿಂದ ನಿರ್ಮಿಸಲಾದ ಐಷಾರಾಮಿ ಕಟ್ಟಡದಲ್ಲಿ ಮಾತ್ರ ಕೂರಿಸಲು ಸಾಧ್ಯವಿಲ್ಲ” ಎಂದು ಸಿಂಗ್ ಹೇಳಿದರು.
“ಶ್ರೀರಾಮನು ಅಯೋಧ್ಯೆಯಲ್ಲಾಗಲೀ ಅಥವಾ ಲಂಕೆಯಲ್ಲಾಗಲೀ ಇಲ್ಲ, ಆದರೆ ಶ್ರೀರಾಮನು ಶಬರಿಯ ಕುಟೀರದಲ್ಲಿದ್ದಾನೆ” ಎಂದರು.