alex Certify ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಸಲಹೆ

ನೆಲ್ಲಿಕಾಯಿ ಆಯುರ್ವೇದ ಮೂಲಿಕೆ. ಫೈಬರ್, ಫೋಲೇಟ್, ಎಂಟಿ ಒಕ್ಸಿಡೆಂಟ್‌ಗಳು, ರಂಜಕ, ಕಬ್ಬಿಣ, ಕಾರ್ಬೋಹೈಡ್ರೇಟ್‌ಗಳು, ಒಮೆಗಾ 3, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ, ವಿಟಮಿನ್‌ಗಳ ಸೇರಿದಂತೆ ಅನೇಕ ಪೋಷಕಾಂಶಗಳು ನೆಲ್ಲಿಕಾಯಿಯಲ್ಲಿವೆ.

ಅದಕ್ಕಾಗಿಯೇ ನೆಲ್ಲಿಕಾಯಿ ಆರೋಗ್ಯಕ್ಕೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ನೆಲ್ಲಿಕಾಯಿ ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಸೇವನೆಯಿಂದ ಚಯಾಪಚಯ ಮತ್ತು ರೋಗನಿರೋಧಕ ಶಕ್ತಿ ಸಹ ಹೆಚ್ಚಾಗುತ್ತದೆ.

ನೆಲ್ಲಿಕಾಯಿ ಅನೇಕ ರೋಗಗಳಿಂದ ನಿಮ್ಮನ್ನು ದೂರವಿಡುತ್ತದೆ. ಮಾತ್ರವಲ್ಲ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಸಹ ಇದು ಸಹಕಾರಿಯಾಗಿದೆ. ನೆಲ್ಲಿಕಾಯಿಯನ್ನು ಹಾಗೇ ತಿನ್ನುವುದು ಅಸಾಧ್ಯವೆನಿಸಿದರೆ ಕ್ಯಾಂಡಿ ಮಾಡಿಕೊಂಡು ಸವಿಯಬಹುದು. ಇದು ಮಸಾಲೆಯುಕ್ತ ರುಚಿಯನ್ನು ಹೊಂದಿರುತ್ತದೆ. ಇದನ್ನು ತಿಂದರೆ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.

ನೆಲ್ಲಿಕಾಯಿ ಕ್ಯಾಂಡಿಗೆ ಬೇಕಾಗುವ ಸಾಮಗ್ರಿ: ಜೀರಿಗೆ 1.5 ಟೀಸ್ಪೂನ್, ಪುಡಿ ಸಕ್ಕರೆ 1.5 ಟೀಸ್ಪೂನ್, 2 ಕೆಜಿ ನೆಲ್ಲಿಕಾಯಿ, ಸಕ್ಕರೆ 1.5 ಕೆ.ಜಿ, ಚಾಟ್ ಮಸಾಲಾ 1.5 ಟೀಸ್ಪೂನ್‌.

ಕ್ಯಾಂಡಿ ಮಾಡುವ ವಿಧಾನ: ಮೊದಲು ನೆಲ್ಲಿಕಾಯಿಯನ್ನು ತೊಳೆದು ಸ್ವಚ್ಛಗೊಳಿಸಿ. ಅದನ್ನು ಕುಕ್ಕರ್‌ನಲ್ಲಿ ಹಾಕಿ 1 ವಿಷಲ್‌ ಹೊಡೆಸಿಕೊಳ್ಳಿ. ಅದು ತಣ್ಣಗಾದ ಬಳಿಕ ಸಿಪ್ಪೆ ತೆಗೆದು ಮಿಠಾಯಿಯ ಆಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ಕತ್ತರಿಸಿದ ನೆಲ್ಲಿಕಾಯಿ ತುಂಡುಗಳನ್ನು ತಟ್ಟೆಯಲ್ಲಿ ಹರಡಿ.

ಅವುಗಳ ಮೇಲೆ ಜೀರಿಗೆ, ಚಾಟ್‌ ಮಸಾಲ ಮತ್ತು ಸಕ್ಕರೆ ಸಿಂಪಡಿಸಿ, ಒಣ ಬಟ್ಟೆಯಿಂದ ಮುಚ್ಚಿ.ಅವುಗಳನ್ನು ಕನಿಷ್ಠ ಒಂದು ಅಥವಾ ಎರಡು ದಿನಗಳವರೆಗೆ ಬಟ್ಟೆಯಿಂದ ಮುಚ್ಚಿಡಿ. ನಂತರ ಸ್ಟ್ರೈನರ್ ಸಹಾಯದಿಂದ  ನೆಲ್ಲಿಕಾಯಿಯ ರಸವನ್ನು ಫಿಲ್ಟರ್ ಮಾಡುವ ಮೂಲಕ ಪ್ರತ್ಯೇಕಿಸಿ. ಬಳಿಕ ಕ್ಯಾಂಡಿಯನ್ನು ಸುಮಾರು ಎರಡು ದಿನಗಳವರೆಗೆ ಒಣಗಲು ಇರಿಸಿ. ಮಸಾಲೆಯುಕ್ತ ನೆಲ್ಲಿಕಾಯಿ ಕ್ಯಾಂಡಿ ಸವಿಯಲು ಸಿದ್ಧವಾಗಿದೆ. ಇದನ್ನು ಹಲವು ದಿನಗಳವರೆಗೆ ಸಂಗ್ರಹಿಸಿಟ್ಟು ತಿನ್ನಬಹುದು.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...