ಹುಬ್ಬಳ್ಳಿ: ಸಂವಿಧಾನದಲ್ಲಿ ಎಲ್ಲಾ ಧರ್ಮಗಳು ಸಮಾನ. ಯಾವ ಧರ್ಮವೂ ಹೆಚ್ಚಲ್ಲ, ಯಾವುದೂ ಕಡಿಮೆಯೂ ಅಲ್ಲ. ಧರ್ಮ ಹಾಗೂ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಹಿಂದೂ ಆದರೂ ಹಿಂದೂತ್ವಕ್ಕೆ ವಿರುದ್ಧವಾಗಿದ್ದೇನೆ. ಧರ್ಮ ಇಟ್ಟುಕೊಂಡು ರಾಜಕೀಯ ಮಾಡುವುದಕ್ಕೆ ವಿರೋಧವಿದೆ. ಸಂವಿಧಾನದ ಪ್ರಕಾರ ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲಾ ಧರ್ಮ, ಜಾತಿ ಸಮಾನವಾದದ್ದು. ಭಾರತ ಬಹುತ್ವದ ದೇಶ. ಹಾಗಾಗಿ ಎಲ್ಲರನ್ನು ಸಮಾನವಾಗಿ ಕಾಣಬೇಕು. ಮನುಷತ್ವವನ್ನು ನೋಡಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆರ್ ಎಸ್ ಎಸ್ ಸ್ಥಾಪನೆಯಾಗಿದೆ. ಆದರೆ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ರಾ? 1925-47ರವರೆಗೆ ಆರ್ ಎಸ್ ಎಸ್ ನ ಯಾರಾದರೂ ಒಬ್ಬರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರೆ ಹೇಳಿ ನೋಡೋಣ ಎಂದು ಗುಡುಗಿದ್ದಾರೆ.