ವೀಕ್ಷಕ ವಿವರಣೆ ವೇಳೆ ಪೋರ್ನ್‌ಸ್ಟಾರ್ ಹೆಸರೇಳಿದ ಪಾಕ್​ ಕಮೆಂಟೇಟರ್…!

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಕರಾಚಿಯಲ್ಲಿ ನಡೆಯಿತು. ಪಂದ್ಯವು ಅಷ್ಟೊಂದು ರೋಮಾಂಚನಕಾರಿಯಾಗಿಲ್ಲದಿದ್ದರೂ, ಆಟದ ಸಮಯದಲ್ಲಿ ಒಂದು ಉಲ್ಲಾಸದ ಘಟನೆಯು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯಿತು.

ಅದೇನೆಂದರೆ, ಪಾಕಿಸ್ತಾನದ ನಿರೂಪಕರೊಬ್ಬರು ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಡ್ಯಾನಿ ಮಾರಿಸನ್ ಅವರನ್ನು ಪೋರ್ನ್‌ಸ್ಟಾರ್ ಡ್ಯಾನಿ ಡೇನಿಯಲ್ಸ್ ಎಂದು ಕನ್​ಫ್ಯೂಸ್​ ಮಾಡಿಕೊಂಡರು. ಹೌದು, ನೀವು ಸರಿಯಾಗಿ ಓದಿದ್ದೀರಿ. ಇದೇ ರೀತಿಯ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋದಲ್ಲಿ ಈ ವಿಷಯವನ್ನು ಕೇಳಬಹುದಾಗಿದೆ. ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮ್ಯಾಟ್ ಹೆನ್ರಿ ಮತ್ತು ಅಜಾಜ್ ಪಟೇಲ್ ನಡುವಿನ 100 ಕ್ಕೂ ಹೆಚ್ಚು ರನ್‌ಗಳ ಕೊನೆಯ ವಿಕೆಟ್-ಸ್ಟ್ಯಾಂಡ್ ಬಗ್ಗೆ ಮಾತನಾಡುವಾಗ, ಪಾಕಿಸ್ತಾನದ ವೀಕ್ಷಕ ವಿವರಣೆಗಾರ ಬಾಜಿದ್ ಖಾನ್ ಅವರು ಕಿವಿ ಕ್ರಿಕೆಟರ್ ಡ್ಯಾನಿ ಮಾರಿಸನ್ ಅವರನ್ನು ಪೋರ್ನ್‌ಸ್ಟಾರ್ ಡ್ಯಾನಿ ಡೇನಿಯಲ್ಸ್ ಎಂದು ಸಂಬೋಧಿಸಿದರು.

ಇದು ಇಲ್ಲಿಗೆ ಮುಗಿಯುವುದಿಲ್ಲ. ಅದರ ಒಂದು ಕ್ಲಿಪ್ ಅಂತರ್ಜಾಲದಲ್ಲಿ ಹರಿದಾಡಲು ಪ್ರಾರಂಭಿಸಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

https://twitter.com/urstruIysunny/status/1610874128814440453?ref_src=twsrc%5Etfw%7Ctwcamp%5Etweetembed%7Ctw

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read