ಚುಮುಚುಮು ಚಳಿಗೆ ಬಿಸಿಬಿಸಿ ಮಸಾಲ ಆಲೂ ಬೋಂಡಾ

ಚಳಿಗಾಲದಲ್ಲಿ ಅದರಲ್ಲೂ ಸಂಜೆಯ ಹೊತ್ತು ಕಾಫಿ ಹೀರುವಾಗ ಬಿಸಿಬಿಸಿಯಾಗಿ ಬಜ್ಜಿ ಬೋಂಡಾ ತಿನ್ನುವ ಮನಸ್ಸು ಯಾರಿಗೆ ಇರಲ್ಲ ಹೇಳಿ ?

ಅದರಲ್ಲೂ ಈ ಸ್ಪೈಸಿ ಆಲೂ ಬೋಂಡಾ ನೀವು ಒಮ್ಮೆ ಟ್ರೈ ಮಾಡಿದರೆ ಮತ್ತೆ ಮತ್ತೆ ಮಾಡಿ ತಿನ್ನುವುದಂತೂ ಖಚಿತ. ಮಸಾಲ ಆಲೂ ಬೋಂಡಾ ಮಾಡೋಕೆ ಮನೆಯಲ್ಲೇ ಇರುವ ಕೆಲವು ಪದಾರ್ಥಗಳು ಸಾಕು.

ಬೇಯಿಸಿದ ಮ್ಯಾಶ್ ಮಾಡಿದ ಆಲೂಗಡ್ಡೆ – 2

ಬೇಯಿಸಿದ ಬಟಾಣಿ – 1 ಕಪ್

ಹಸಿ ಮೆಣಸಿನಕಾಯಿ – 5 ರಿಂದ 6

ಪುದೀನಾ – ಸ್ವಲ್ಪ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಶುಂಠಿ ಬೆಳ್ಳಳ್ಳಿ ಪೇಸ್ಟ್ – ಅರ್ಧ ಚಮಚ

ಚಕ್ಕೆ – ಒಂದು ಚಿಕ್ಕ ತುಂಡು

ಅರಿಶಿನ ಪುಡಿ – ಸ್ವಲ್ಪ

ಕಡಲೇ ಹಿಟ್ಟು – ಎರಡು ಕಪ್

ಅಕ್ಕಿ ಹಿಟ್ಟು – ಅರ್ಧ ಕಪ್

ಎಣ್ಣೆ – ಕರಿಯಲು ಬೇಕಾದಷ್ಟು

ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಮೊದಲು ಚಿಕ್ಕ ಮಿಕ್ಸಿ ಜಾರಿಗೆ ಹಸಿ ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಕ್ಕೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಒಗ್ಗರಣೆ ಮಾಡಿ ರುಬ್ಬಿದ ಮಸಾಲೆ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ.

ಇದಕ್ಕೆ ಬೇಯಿಸಿದ ಬಟಾಣಿ, ಅರಿಶಿನ ಪುಡಿ ಹಾಗೂ ಮ್ಯಾಶ್ ಮಾಡಿದ ಆಲೂಗಡ್ಡೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಾದವರು ನಿಂಬೆ ರಸವನ್ನು ಇದಕ್ಕೆ ಹಿಂಡಬಹುದು.

ಈ ಆಲೂಗಡ್ಡೆ ಮಸಾಲೆ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ಕಟ್ಟಿ, ಬೋಂಡಾ ಹಿಟ್ಟಿನ ಹದಕ್ಕೆ ಕಲಿಸಿದ ಕಡಲೇ ಹಾಗೂ ಅಕ್ಕಿ ಹಿಟ್ಟಿನ ಬ್ಯಾಟರ್ನಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಹದವಾಗಿ ಕರೆಯಿರಿ. ಈ ಚಳಿಗಾಲದಲ್ಲಿ ಮಸಾಲ ಆಲೂ ಬೋಂಡಾ ಕಾಫಿ ಅಥವಾ ಟೀ ಜೊತೆಗೆ ಸೂಪರ್ ಕಾಂಬಿನೇಷನ್.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read